Home ಧಾರ್ಮಿಕ ಸುದ್ದಿ ‘ಹರಿಕಥೆ ಕೇಳುವುದರಿಂದ ನಾಸ್ತಿಕತೆ ಮಾಯ’

‘ಹರಿಕಥೆ ಕೇಳುವುದರಿಂದ ನಾಸ್ತಿಕತೆ ಮಾಯ’

983
0
SHARE

ಉಡುಪಿ : ಹರಿಕಥಾ ಪರಿಷತ್ತುಗಳು ಸಮೃದ್ಧವಾಗಿ ಬೆಳೆದು ಗ್ರಾಮೀಣ ಭಾಗದಲ್ಲಿ ಹರಿಕಥೆ ಬಗೆ ಜಾಗೃತಿ ಮೂಡಲಿ. ಆ ಮೂಲಕ ಜನರ ಮನಸ್ಸಿನಲ್ಲಿರುವ ನಾಸ್ತಿಕತೆ ಮಾಯವಾಗಲಿ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದರು.

ಉಡುಪಿ ಶ್ರೀ ಕೃಷ್ಣ ಮಠ, ಪರ್ಯಾಯ ಪಲಿಮಾರು ಮಠ, ಮಂಗಳೂರು ಹರಿಕಥಾ ಪರಿಷತ್ತು, ಬೆಂಗಳೂರು ಅಖೀಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು, ಕಾರ್ಕಳ ಶ್ರೀ ಹಂಡೆದಾಸ ಪ್ರತಿಷ್ಠಾನ ಸಹಯೋಗದಲ್ಲಿ ಗುರುವಾರ ರಾಜಾಂಗಣದಲ್ಲಿ ಆಯೋಜಿಸಿದ್ದ “60 ದಿನಗಳ ನಿರಂತರ ಹರಿಕಥಾ ಜ್ಞಾನ ಯಜ್ಞ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜನರಿಗೆ ಮನೋರಂಜನೆ ನೀಡುವುದರ ಜತೆಗೆ ಮನಸ್ಸಿನಲ್ಲಿ ದೇವರನ್ನು ನೆಲೆಸುವಂತೆ ಮಾಡಲು ಹರಿಕಥಾ ಕಾರ್ಯಕ್ರಮ ಸಹಕಾರಿ. ಶ್ರೀ ಕೃಷ್ಣ ಮಠದಲ್ಲಿ ಅನೇಕ ಹರಿಕಥಾ ಭಾಗಗಳು ನಡೆದಿವೆ. ಆದರೆ ಇದೇ ಮೊದಲ 60 ದಿನಗಳ ಕಾಲ ನಿರಂತರವಾಗಿ ವಿವಿಧ ಊರುಗಳ ಹರಿದಾಸರನ್ನು ಕರೆದು ಹರಿಕಥಾ ಕಾರ್ಯ ಕ್ರಮವನ್ನು ನಡೆಸಿರುವುದು ಶ್ಲಾಘನೀಯ. 4ವರ್ಷದ ಮಗು ಸಹ ಹರಿಕಥಾ ಭಾಗ ನಡೆಸಿಕೊಟ್ಟಿರುವುದು ಈ ಬಾರಿ ವಿಶೇಷ ಎಂದರು.

ಉಡುಪಿ ಸಿಂಡಿಕೇಟ್‌ ಬ್ಯಾಂಕ್‌ ನಿವೃತ್ತ ಅಧಿಕಾರಿ ದೇವಾನಂದ ಉಪಾಧ್ಯಾಯ, ಮಂಗಳೂರು ಹರಿಕಥಾ ಪರಿಷತ್ತು ಅಧ್ಯಕ್ಷ ಮಹಾಬಲ ಶೆಟ್ಟಿ, ಬೆಂಗಳೂರು ಕೀರ್ತನ ಕಲಾ ಪರಿಷತ್ತು ಲೋಕೇಶದಾಸ, ಕಾರ್ಕಳ ಹಂಡೆದಾಸ ಪ್ರತಿಷ್ಠಾನದ ರುಕ್ಮಣಿ ಹಂಡೆ, ಬೆಂಗಳೂರು ನಾಗರಾಜ್‌ ಉಪಸ್ಥಿತರಿದ್ದರು. ಪರಿಷತ್ತಿನ ಜಿಲ್ಲಾ ಸಂಚಾಲಕ ವೈ. ಅನಂತಪದ್ಮನಾಭ ಭಟ್‌ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್‌ ವಂದಿಸಿದರು.

LEAVE A REPLY

Please enter your comment!
Please enter your name here