Home ಧಾರ್ಮಿಕ ಸುದ್ದಿ ಫೆ. 18-21: ಬ್ರಹ್ಮ ಕಲಶೋತ್ಸವ, ರಥೋತ್ಸವ

ಫೆ. 18-21: ಬ್ರಹ್ಮ ಕಲಶೋತ್ಸವ, ರಥೋತ್ಸವ

ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇಗುಲ

1088
0
SHARE

ಉಡುಪಿ: ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇಗುಲದ ಜೀರ್ಣಾಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ರಥೋತ್ಸವವು ಫೆ. 18ರಿಂದ 21ರ ವರೆಗೆ ನಡೆಯಲಿದೆ.

ಫೆ. 18ರ ಬೆಳಗ್ಗೆ 9.30ಕ್ಕೆ ತೋರಣ ಮುಹೂರ್ತ, ಗಣಪತಿ ಯಾಗ, ಗ್ರಹಯಾಗ, ಸಂಜೆ 6.30ಕ್ಕೆ ಸ್ಥಾನಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಪೂಜಾ, ಬಲಿ ಹೋಮ, ಫೆ. 19ರ ಸಂಜೆ 4ಕ್ಕೆ ಹಸುರು ಹೊರೆಕಾಣಿಕೆ ಮೆರವಣಿಗೆ, ಶಾಂತಿ ಹೋಮ, ಫೆ. 20ರ ಬೆಳಗ್ಗೆ 9.30ಕ್ಕೆ ಕಲಶಾಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ, 11ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ, ರಾತ್ರಿ 8ರಿಂದ ರಂಗಪೂಜೆ ನಡೆಯಲಿದೆ.

ಫೆ. 21ರ ಬೆಳಗ್ಗೆ 8ರಿಂದ ಶತರುದ್ರಾಭಿಷೇಕ, 10ರಿಂದ ಧ್ವಜಾರೋಹಣ, ಸಂಜೆ 6.30ರಿಂದ ಉತ್ಸವಬಲಿ, ಪುರಮೆರವಣಿಗೆ, ಮಹಾರಂಗ ಪೂಜೆ, ಫೆ. 22ರಂದು ಅಗ್ನಿ ಜನನಹೋಮ, ಪ್ರಧಾನ ಹೋಮ, ಸಂಜೆ 6.30ರಿಂದ ಉತ್ಸವಬಲಿ, ಪುರಮೆರವಣಿಗೆ, ಮಹಾರಂಗ ಪೂಜೆ, ಫೆ. 23ರಂದು ಉತ್ಸವ ಪ್ರಧಾನ ಬಲಿ, ಕಲಶಾಭಿಷೇಕ, ರಥಶುದ್ಧಿ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 5ಕ್ಕೆ ಶ್ರೀಮನ್ಮಹಾರಥೋತ್ಸವ, ಫೆ. 24ರ ಬೆಳಗ್ಗೆ 8ರಿಂದ ಪ್ರಭೋದೋತ್ಸವ, ಸಂಜೆ 6.30ಕ್ಕೆ ಚೂರ್ಣೋತ್ಸವ, ಓಕುಳಿ, ಧ್ವಜಾವರೋಹಣ, ಪೂರ್ಣಾಹುತಿ ಜರಗಲಿದೆ.

ಪ್ರತಿದಿನ ಸಂಜೆ ಸಂಜೆ 7ರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಪ್ರಧಾನ ಅರ್ಚಕ ನರಸಿಂಹ ಸೋಮಯಾಜಿ, ಆಡಳಿತ ಮೊಕ್ತೇಸರ ಎಚ್‌. ರತ್ನಾಕರ ಹೆಗ್ಡೆ ಹಾರಾಡಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here