Home ಧಾರ್ಮಿಕ ಸುದ್ದಿ ‘ಸೇವೆ ಎನ್ನುವುದು ದೀಪದ ಬೆಳಕಿನಂತೆ’

‘ಸೇವೆ ಎನ್ನುವುದು ದೀಪದ ಬೆಳಕಿನಂತೆ’

ಗುರುಸೇವಾ ಪರಿಷತ್‌ ಸಂಘಟನೆ ಉದ್ಘಾಟನೆ

642
0
SHARE

ಉಡುಪಿ: ಸೇವೆ ಅಂದರೆ ದೀಪದ ಬೆಳಕಿನಂತೆ . ಅದಕ್ಕೆ ಬತ್ತಿ, ಎಣ್ಣೆ, ಹಣತೆ, ಗಾಳಿ ಎಲ್ಲವೂ ಬೇಕು. ಅದೇ ರೀತಿಯಲ್ಲಿ ಸಮಾಜದ ಎಲ್ಲ ವರ್ಗದ ಸಮಾನ ಮನಸ್ಕರು ಅಲ್ಲಿರಬೇಕು ಎಂದು ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.

ಇಲ್ಲಿನ ಗಾಯತ್ರಿ ಕಲ್ಯಾಣಮಂಟಪದಲ್ಲಿ ಉಡುಪಿ ವಲಯದ ಗುರುಸೇವಾ ಪರಿಷತ್‌ ಸಂಘಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿರುವ ದುರ್ಬಲರು, ಅಶಕ್ತರ ಸೇವೆ ಮಾಡಿದರೆ ಅದೇ ಗುರುಗಳ ಸೇವೆ. ಸಣ್ಣ ವ್ಯಕ್ತಿಗಳ ಸೇವೆಯಿಂದ ದೊಡ್ಡ ಸೇವಾ ಸಂಸ್ಥೆಯಾಗಬೇಕು ಎಂದರು.

ಜ್ಯೋತಿಷ್ಯ ವಿದ್ವಾನ್‌ ಉಮೇಶ್‌ ಆಚಾರ್ಯ ಪಡೀಲ್ ಧಾರ್ಮಿಕ ಉಪನ್ಯಾಸ ನೀಡಿ, ಮನುಷ್ಯರಿಗೆ ತಾಯಿಯ ಅನಂತರದ ಸ್ಥಾನ ಗುರು. ಗುರುಗಳನ್ನು ಮರೆತರೆ ತಾಯಿಯನ್ನು ಮರೆತಂತೆ ಎಂದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಎಂ.ಜಿ.ಎಂ. ಕಾಲೇಜಿನ ಬಳಿಯಿಂದ ಕಲ್ಯಾಣ ಮಂಟಪದ ತನಕ ಪೂರ್ಣ ಕುಂಭ ಸ್ವಾಗತದೊಂದಿಗೆ ಸೇವಾ ಪರಿಷತ್‌ ಸದಸ್ಯರು ಬರಮಾಡಿಕೊಂಡರು.

ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ದಂಪತಿಗಳು ಗುರುಗಳ ಪಾದಪೂಜೆ ನೆರವೇರಿಸಿದರು. ಮಹಾಸಂಸ್ಥಾನದ ಅಧ್ಯಕ್ಷ ಸೂರ್ಯಕುಮಾರ್‌, ಗುರು ಸೇವಾ ಪರಿಷತ್‌ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಒಳಕಾಡು, ಉಡುಪಿ ತಾಲೂಕು ಕಾರ್ಪೆಂಟರ್‌ ಯೂನಿಯನ್‌ ಅಧ್ಯಕ್ಷ ಗೋಕುಲ್ ಆಚಾರ್ಯ ನಿಟ್ಟೂರು, ಉಡುಪಿ ಜಿಲ್ಲಾ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್‌ ಆಚಾರ್ಯ ಗುಂಡಿಬೈಲ್, ಗುರುಸೇವಾ ಪರಿಷತ್‌ ಗೌರವಾಧ್ಯಕ್ಷ ಗೋಪಾಲ್ ಕೃಷ್ಣ ಆಚಾರ್ಯ ಪರ್ಕಳ ಉಪಸ್ಥಿತರಿದ್ದರು.

ಕಾರ್ಯದರ್ಶಿ ಪಿ.ವಿ.ನಾಗರಾಜ ಆಚಾರ್ಯ ಸ್ವಾಗತಿಸಿ, ಲೋಕೇಶ್‌ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ್‌ ಆಚಾರ್ಯ ವಂದಿಸಿ, ಹರೀಶ್‌ ಆಚಾರ್ಯ ಮತ್ತು ಹರೀಶ್ಚಂದ್ರ ಆಚಾರ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here