Home ಧಾರ್ಮಿಕ ಕ್ಷೇತ್ರಗಳು ಪೇಜಾವರಶ್ರೀ ನೇತೃತ್ವದಲ್ಲಿ ಸರಕಾರಿ ಗೋಶಾಲೆಗೆ ಸಮ್ಮತಿ

ಪೇಜಾವರಶ್ರೀ ನೇತೃತ್ವದಲ್ಲಿ ಸರಕಾರಿ ಗೋಶಾಲೆಗೆ ಸಮ್ಮತಿ

2028
0
SHARE
Udupi Pejavara Math
Udupi Pejavara Math

ಉಡುಪಿ: ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಬಳಿಕ ರಾಜ್ಯ ಸರಕಾರವು ಜಿಲ್ಲಾವಾರು ಗೋಶಾಲೆಗಳನ್ನು ಸ್ಥಾಪಿಸಲು ತ್ವರಿತ ಸಿದ್ಧತೆಗಳನ್ನು ನಡೆಸುತ್ತಿದೆ. ಇದರ ಅಂಗವಾಗಿ ಉಡುಪಿ ಜಿಲ್ಲೆಯಲ್ಲೂ ಸರಕಾರಿ ಗೋಶಾಲೆ ಸ್ಥಾಪನೆಗೆ ಪಶು ಸಂಗೋಪನ ಇಲಾಖೆಯು ನಿರ್ಧರಿಸಿದ್ದು ಈ ಕುರಿತು ಉಡುಪಿಯ ಶ್ರೀ ಪೇಜಾವರ ಮಠದಲ್ಲಿ ಸಮಾಲೋಚನೆ ಸಭೆಯು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬುಧವಾರ ನಡೆಯಿತು.

ಇಲಾಖೆಯ ಉಪನಿರ್ದೇಶಕ ಶ್ರೀ ಶಂಕರ ಶೆಟ್ಟಿಅವರು ಉಡುಪಿಯಲ್ಲಿ ಸರಕಾರಿ ಗೋಶಾಲೆ ಸ್ಥಾಪನೆಯ ಕುರಿತಾಗಿ ಸರಕಾರದ ಸೂಚನೆಯನ್ನು ವಿವರಿಸಿದರು.

ಗೋಶಾಲೆಯು ಸರಕಾರದ ನಿರ್ದೇಶಾನುಸಾರವೇ ನಡೆಯಬೇಕಾಗಿದೆ. ಶಾಸಕರು ಮತ್ತು ಇಲಾಖೆಯ ಚಿಂತನೆಯಂತೆ ಈಗಾಗಲೇ ಗೋಶಾಲೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಶ್ರೀ ಪೇಜಾವರ ಶ್ರೀಗಳ ಸಾರಥ್ಯದಲ್ಲೇ ನೂತನ ಗೋಶಾಲೆಯೂ
ನಡೆದರೆ ಸುಸೂತ್ರವಾಗಿ ನಡೆಯುತ್ತದೆ ಎಂಬ ಹಿನ್ನೆಲೆಯಲ್ಲಿ ಸುದೀರ್ಘ‌ ಸಮಾಲೋಚನೆಯು ನಡೆಯಿತು.

ಅದರಂತೆ ಶ್ರೀಗಳ ನೇತೃತ್ವದ ಶ್ರೀ ವಿಶ್ವೇಶ ಕೃಷ್ಣ ಗೋಸೇವಾ ಟ್ರಸ್ಟ್. ಈ ಗೋಶಾಲೆಯ ನೇತೃತ್ವ ವಹಿಸಿ ಮುನ್ನಡೆಸುವುದು. ಈ ಉದ್ದೇಶಕ್ಕಾಗಿ ಕಾದಿರಿಸಲಾಗಿರುವ ಹೆಬ್ರಿ ತಾಲೂಕು ಶಿವಪುರ ಗ್ರಾಮದ ಕೆರೆಬೆಟ್ಟಿನಲ್ಲಿರುವ 13.24ಎಕ್ರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಸದ್ರಿ ಟ್ರಸ್ಟ್ ಗೆ ನೀಡಿ, ಸರಕಾರದ ಅನುದಾನದಲ್ಲಿ ಗೋಶಾಲೆ ಸ್ಥಾಪಿಸುವ ಬಗ್ಗೆ ಇಲಾಖೆ ಮಂಡಿಸಿದ ಚಿಂತನೆಗೆ ಶ್ರೀಗಳು ಮತ್ತು ಸಭೆಯಲ್ಲಿ ಉಪಸ್ಥಿತರಿದ್ದ ಟ್ರಸ್ಟ್ ನ ಎಲ್ಲ ವಿಶ್ವಸ್ತರೂ
ಸಮ್ಮತಿಯನ್ನು ಸೂಚಿಸಿದರು.

ಸರಕಾರದ ನಿಯಮಾವಳಿಗಳನ್ನು ಖಾತರಿಪಡಿಸಿಕೊಂಡು ಗೋಶಾಲೆಯನ್ನು ನಡೆಸಲು ಶ್ರೀಗಳು ಸಮ್ಮತಿಸಿದರು. ಕೈಗೊಂಡ ನಿರ್ಣಯಗಳನ್ನು ಶ್ರೀಗಳವರಿಂದ ಸ್ವೀಕರಿಸಿದ ಉಪನಿರ್ದೇಶಕ ಶಂಕರ ಶೆಟ್ಟರು ಅದನ್ನು ಕೂಡಲೇ ಸರಕಾರಕ್ಕೆ ಕಳಿಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಇಲಾಖೆಯ ನಿವೃತ್ತ ನಿರ್ದೇಶಕ ಡಾ| ಸರ್ವೋತ್ತಮ ಉಡುಪ, ಗೋಸೇವಾ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here