Home ಧಾರ್ಮಿಕ ಸುದ್ದಿ ಗಣಪತಿ ದೇವಸ್ಥಾನ, ಗಣೇಶೋತ್ಸವಗಳಿಗೆ ಲಕ್ಷಾಂತರ ಭಕ್ತರ ಭೇಟಿ

ಗಣಪತಿ ದೇವಸ್ಥಾನ, ಗಣೇಶೋತ್ಸವಗಳಿಗೆ ಲಕ್ಷಾಂತರ ಭಕ್ತರ ಭೇಟಿ

ಕರಾವಳಿಯಲ್ಲಿ ಚೌತಿ ಸಂಭ್ರಮ

280
0
SHARE
ಮಂಗಳೂರು: ನಗರದ ಶರವು ಶ್ರೀ ಮಹಾಗಣಪತಿ ದೇವರಿಗೆ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಉಡುಪಿ: ಕರಾವಳಿಯಾ ದ್ಯಂತ ಸೋಮವಾರ ಆರಂಭವಾದಗಣೇಶ ಚತುರ್ಥಿ ಸಂಭ್ರಮ ಮಂಗಳ ವಾರವೂ ಮುಂದುವರಿದಿತ್ತು. ಮಳೆ ಬಿಡದೆ ಸುರಿಯುತ್ತಿದ್ದರೂ ಲಕ್ಷಾಂತರ ಜನರು ವಿವಿಧ ದೇವಸ್ಥಾನಗಳು, ಸಾರ್ವಜನಿಕ ಗಣೇಶೋತ್ಸವ ಪೆಂಡಾಲುಗಳಿಗೆ ತೆರಳಿ ವಿವಿಧ ಸೇವೆ ಗಳನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಪ್ರಸಿದ್ಧ ಗಣಪತಿ ದೇವಸ್ಥಾನಗಳಾದ ದ.ಕ. ಜಿಲ್ಲೆಯ ಶರವು, ಸೌತಡ್ಕ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಪೆರ್ಣಂಕಿಲ, ಬಾರಕೂರು ಬಟ್ಟೆ ವಿನಾಯಕ, ಉದ್ಯಾವರ, ಉಪ್ಪೂರು, ಪಡುಬಿದ್ರಿ, ಸೋಮೇಶ್ವರ ದೇವಸ್ಥಾನ ಗಳಲ್ಲಿ ಕಿಕ್ಕಿರಿದ ಜನಸಂದಣಿ ಇತ್ತು.

ಶರವು ದೇವಸ್ಥಾನಕ್ಕೆ 80 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದರು. 250 ಕೆ.ಜಿ. ಗೋಧಿಯಿಂದ ತಯಾರಿಸಿದ ಅಪ್ಪ, 3 ಕ್ವಿಂಟಾಲ್ ಅಷ್ಟದ್ರವ್ಯ, 4 ಕ್ವಿಂ.ಕಡಲೆ ಬೇಳೆ ಪಂಚಕಜ್ಜಾಯ ಗಳನ್ನು ಭಕ್ತರು ಪ್ರಸಾದವಾಗಿ ಸ್ವೀಕರಿಸಿದರು.

ಆನೆಗುಡ್ಡೆ ದೇವಸ್ಥಾನಕ್ಕೆ ಸುಮಾರು 25 ಸಾವಿರ ಭಕ್ತರು ಭೇಟಿ ನೀಡಿದರು. 11,500 ಪ್ಯಾಕೆಟ್ ಪಂಚಕಜ್ಜಾಯ, 5 ಸಾವಿರ ಕೊಟ್ಟೆ ಕಡುಬನ್ನು ಭಕ್ತರು ಪಡೆದರು. 9 ಸಾವಿರ ಜನರು ಭೋಜನ ಪ್ರಸಾದ ಸ್ವೀಕರಿಸಿದರು. ಸಹಸ್ರನಾಳಿಕೇರ ಗಣಪತಿ ಯಾಗ ನಡೆಯಿತು.

ಮಧೂರು ದೇವಸ್ಥಾನಕ್ಕೆ 35 ಸಾವಿರ ಸಾವಿರಾರು ಭಕ್ತರು ಭೇಟಿ ನೀಡಿದ್ದು, ಸುಮಾರು 3 ಸಾವಿರ ಜನರು ಭೋಜನ ಪ್ರಸಾದ ಸ್ವೀಕರಿಸಿದರು. 450 ಕೆ.ಜಿ. ಅಕ್ಕಿ ಹುಡಿಯಿಂದ ತಯಾರಿಸಿದ ಅಪ್ಪ, ಸುಮಾರು 2 ಸಾವಿರಕ್ಕೂ ಹೆಚ್ಚು ಪಂಚಕಜ್ಜಾಯ ಪ್ಯಾಕೆಟ್ ವಿತರಿಸಲಾಯಿತು.

ಸೌತಡ್ಕ ದೇವಸ್ಥಾನಕ್ಕೆ 30 ಸಾವಿರ ಜನರು ಭೇಟಿ ನೀಡಿದರು. ಮಧ್ಯಾಹ್ನ ಆರೂವರೆ ಸಾವಿರ ಜನರು ಭೋಜನ ಪ್ರಸಾದ ಸ್ವೀಕರಿಸಿದರು. 7 ಸಾವಿರ ಅಪ್ಪಕಜ್ಜಾಯ, 2 ಸಾವಿರ ಲಡ್ಡು, 2 ಸಾವಿರ ಮೋದಕ, 500 ಕಡಲೆ ಪಂಚಕಜ್ಜಾಯ, 8 ಸಾವಿರ ಅವಲಕ್ಕಿ ಪಂಚಕಜ್ಜಾಯ ಪ್ಯಾಕೆಟ್‌ಗಳನ್ನು ಭಕ್ತರು ಸ್ವೀಕರಿಸಿದರು.

ಪೆರ್ಣಂಕಿಲದ ದೇವಸ್ಥಾನಕ್ಕೆ 20 ಸಾವಿರ ಭಕ್ತರು ಭೇಟಿ ಕೊಟ್ಟರು. ಗ್ರಾಮಾಂತರ ಪ್ರದೇಶವಾದ ಕಾರಣ ಭಕ್ತರ ಆಗಮನಕ್ಕೆ ಮಳೆಯಿಂದಾಗಿ ತೊಂದರೆಯಾಯಿತು. 1.5 ಕ್ವಿಂಟಾಲ್ ಅಕ್ಕಿಯ ಅಪ್ಪವನ್ನು ಭಕ್ತರು ಸ್ವೀಕರಿಸಿದ್ದು, ಮೂರೂವರೆ ಸಾವಿರಕ್ಕೂ ಹೆಚ್ಚು ಮಂದಿ ಪ್ರಸಾದ ಭೋಜನ ಸ್ವೀಕರಿಸಿದರು. ರಾತ್ರಿ ಹೂವಿನ ಪೂಜೆ ಸಂಪನ್ನಗೊಂಡಿತು.

ಗುಡ್ಡಟ್ಟು ದೇವಸ್ಥಾನಕ್ಕೆ ಸುಮಾರು 10 ಸಾವಿರ ಜನರು ಭೇಟಿ ನೀಡಿದರು. 2 ಸಾವಿರ ಪ್ಯಾಕೆಟ್ ಪಂಚಕಜ್ಜಾಯಗಳನ್ನು ಪಡೆದುಕೊಂಡರು. 750 ಭಕ್ತರು ಸೇವಾರ್ಥಿಗಳಾಗಿ ಗಣಹೋಮದಲ್ಲಿ ಪಾಲ್ಗೊಂಡರು. 1 ಸಾವಿರ ಜನರು ಭೋಜನ ಸ್ವೀಕರಿಸಿದರು.

ಹಟ್ಟಿಯಂಗಡಿ ದೇವಸ್ಥಾನಕ್ಕೆ 20 ಸಾವಿರ ಭಕ್ತರು ಭೇಟಿ ನೀಡಿದರೆ 6 ಸಾವಿರ ಜನರು ಭೋಜನ ಪ್ರಸಾದ ಸ್ವೀಕರಿಸಿದರು. 5 ಸಾವಿರ ಪ್ಯಾಕೆಟ್ ಪಂಚಕಜ್ಜಾಯ, ಸಾವಿರ ಮೋದಕ ಪ್ಯಾಕೆಟ್‌ಗಳನ್ನು ಭಕ್ತರು ಪಡೆದುಕೊಂಡರು.

ಪಡುಬಿದ್ರಿ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ 25 ಸಾವಿರ ಭಕ್ತರು ಭೇಟಿ ನೀಡಿದರು. 1 ಕ್ವಿಂಟಾಲ್ನಷ್ಟು ಪಂಚಕಜ್ಜಾಯ, 300 ಪ್ಯಾಕೆಟ್ ಅಪ್ಪಗಳನ್ನು ಭಕ್ತರು ಸ್ವೀಕರಿಸಿದರು. ಈಶ್ವರನಿಗೆ 800 ರುದ್ರಾಭಿಷೇಕ ಸೇವೆಗಳೂ ನಡೆದವು. 700 ಸೇವಾಕರ್ತರು ಗಣಪತಿ ಹೋಮದಲ್ಲಿ ಪಾಲ್ಗೊಂಡರು.

ಬಾರಕೂರಿನ ಬಟ್ಟೆ ವಿನಾಯಕ ದೇವಸ್ಥಾನಕ್ಕೆ ಸುಮಾರು 10 ಸಾವಿರ ಜನರು ಭೇಟಿ ಕೊಟ್ಟರು. ಅಷ್ಟೇ ಪಂಚಕಜ್ಜಾಯ ಪ್ಯಾಕೆಟ್, 3 ಸಾವಿರ ಕೊಟ್ಟೆ ಕಡುಬನ್ನು ಭಕ್ತರು ಸ್ವೀಕರಿಸಿದರು.

ಏಕಮಾತ್ರ ಆಗಮೋಕ್ತ ಗಣಪತಿ ದೇವಸ್ಥಾನವಾದ ಉಪ್ಪೂರು ದೇವಸ್ಥಾನಕ್ಕೆ 5 ಸಾವಿರ ಭಕ್ತರು ಭೇಟಿ ನೀಡಿದರು. 480 ಪಂಚಗಜ್ಜಾಯ ಪ್ಯಾಕೆಟ್, ಸಾವಿರದೈನೂರು ಕೊಟ್ಟೆ ಕಡುಬು ವಿತರಿಸಲಾಯಿತು. ಗಣಪತಿ ಹವನಕ್ಕೆ 520 ಸೇವಾರ್ಥಿಗಳಿದ್ದರು.

ಹೆಬ್ರಿ ಸೋಮೇಶ್ವರ ದೇವಸ್ಥಾನಕ್ಕೆ 5 ಸಾವಿರ ಜನರು ಭೇಟಿ ಕೊಟ್ಟಿದ್ದರು. 2 ಸಾವಿರ ಮೂಡೆ ಕಡುಬನ್ನು ಭಕ್ತರಿಗೆ ವಿತರಿಸಿದರು. 500 ಅಪ್ಪ ಸೇವೆ, 12 ಮೂಡುಗಣಪತಿ ಸೇವೆಯನ್ನು ಭಕ್ತರು ಸಲ್ಲಿಸಿದರು.

LEAVE A REPLY

Please enter your comment!
Please enter your name here