Home ಧಾರ್ಮಿಕ ಕಾರ್ಯಕ್ರಮ ಪ್ರತಿಷ್ಠಾ ವರ್ಧಂತಿ ಮಹೋತ್ಸವಕ್ಕೆ ಚಾಲನೆ

ಪ್ರತಿಷ್ಠಾ ವರ್ಧಂತಿ ಮಹೋತ್ಸವಕ್ಕೆ ಚಾಲನೆ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

1486
0
SHARE

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ 13ನೇ ಪ್ರತಿಷ್ಠಾ ವಾರ್ಷಿಕ ವರ್ಧಂತ್ಯುತ್ಸವದ ಪ್ರಯುಕ್ತ ನಾಗಾಲಯದ ನಾಗರಾಜ-ರಾಣಿಯರ ಸನ್ನಿಧಾನದಲ್ಲಿ ಪವಮಾನ, ಕೂಷ್ಮಾಂಡ, ಬ್ರಹ್ಮಗಾಯತ್ರಿ ಮಂತ್ರ ಹೋಮ, ಪ್ರಧಾನ ಹೋಮ, ಪಂಚ ವಿಂಶತಿ ಕಲಶಾಭಿಷೇಕ, ಸರ್ವ ಪ್ರಾಯಶ್ಚಿತ್ತ ಪೂರ್ವಕ ಆಶ್ಲೇಷಾ ಬಲಿದಾನ, ವಟು, ಸುವಾಸಿನಿ ಆರಾಧನೆ, ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಪವಮಾನ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಪಾಯಸ ಹೋಮ, ಪಂಚ ವಿಂಶತಿ ಕಲಶಾಭಿಷೇಕ, ಪ್ರಸನ್ನ ಪೂಜೆ ನೆರವೇರಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ ವಾಸ್ತು ರಾಕ್ಷೋಘ್ನ ಪ್ರಕ್ರಿಯೆ, ಸುಬ್ರಹ್ಮಣ್ಯ ಸನ್ನಿಧಾನದಲ್ಲಿ ರಂಗಪೂಜಾ ಮಹೋತ್ಸವ ನಡೆಯಿತು.

ಮೇ 18ರಂದು ಶ್ರಿ ಕ್ಷೇತ್ರದಲ್ಲಿ ಬೆಳಗ್ಗೆ 10.15ಕ್ಕೆ ಬ್ರಹ್ಮಕುಂಭಾಭಿಷೇಕ ಸಂಪನ್ನಗೊಳ್ಳಲಿದೆ. ಚಂದ್ರಶೇಖರ ದೇವಾಡಿಗ ಹಿರಿಯಡ್ಕ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್‌ ವಾದನ, ಸಂಜೆ ಆರಾಧನಾ ರಂಗಪೂಜಾ ಮಹೋತ್ಸವ, ಬಲಿ ಉತ್ಸವ, ತೊಟ್ಟಿಲು ಸೇವೆ, ವಸಂತ ಪೂಜೆ ಜರಗಲಿದೆ. ಮೇ 19ರಂದು ಶ್ರೀ ಚಂಡಿಕಾಯಾಗ, ಸಂಜೆ ಕ್ಷೇತ್ರದ ಧರ್ಮ ದೈವಗಳಾದ ಕಲ್ಕುಡ, ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸಾ ಕಾಪು ಅವರಿಂದ ತುಳು ಹಾಸ್ಯಮಯ ಕಾರ್ಯಕ್ರಮ ನೆರವೇರಲಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here