Home ಧಾರ್ಮಿಕ ಸುದ್ದಿ ಜೋಡಿ ಚಂಡಿಕಾಯಾಗ ಸಂಪನ್ನ

ಜೋಡಿ ಚಂಡಿಕಾಯಾಗ ಸಂಪನ್ನ

ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ

544
0
SHARE

ಉಡುಪಿ : ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಪ್ರಯುಕ್ತ ಜೋಡಿ ಚಂಡಿಕಾಯಾಗವು ಸಾಣೂರಿನ ದೇವಪ್ಪ ಆಚಾರ್ಯ ಮತ್ತು ಮಕ್ಕಳು, ಕಾರ್ಕಳದ ಸುಲೋಚನಾ ಗೋಪಾಲಾಚಾರ್ಯ ಮತ್ತು ಮಕ್ಕಳ ಸೇವಾರ್ಥವಾಗಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ಮಂಗಳವಾರ ಸಮರ್ಪಿಸಲ್ಪಟ್ಟಿತು.

ಕ್ಷೇತ್ರದ ಮಹಾ ಸೇವೆಯಾದ ನೃತ್ಯ ಸೇವೆಯು ಉದ್ಯಾವರದ ಶ್ರೇಷ್ಠ, ರಚಿತಾ, ಸ್ವಾತಿ ಆಚಾರ್ಯ ಅವರಿಂದ ನೆರವೇರಿತು. ಮಧ್ಯಾಹ್ನದ ಮಹಾಪೂಜೆಯಲ್ಲಿ ದುರ್ಗಾಶಕ್ತಿ ದೇವಿಯನ್ನು ವಿಶೇಷವಾಗಿ ಚಂದ್ರಘಂಟ ರೂಪದಲ್ಲಿ ಅಲಂಕರಿಸಲಾಗಿತ್ತು. ಸಹಸ್ರ ಸಂಖ್ಯೆಗೂ ಮಿಕ್ಕಿದ ಭಕ್ತರು ಮಹಾ ಅನ್ನಪ್ರಸಾದ ಸ್ವೀಕರಿಸಿದರು.

ಸಂಜೆ ಹಾವಂಜೆ ಶಂಕರಾಚಾರ್ಯ ಮತ್ತು ಕುಟುಂಬಸ್ಥರ ಸೇವಾರ್ಥವಾಗಿ ದುರ್ಗಾ ನಮಸ್ಕಾರ ಪೂಜೆ, ಕಟಪಾಡಿಯ ಶಾರದಾ ಹರಿಶ್ಚಂದ್ರ ಅವರ ಸೇವಾರ್ಥವಾಗಿ ರಂಗಪೂಜೆ ನೆರವೇರಿತು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಕಲಾನಿಧಿ ತಂಡ ಉಡುಪಿ ಅವರಿಂದ ಸಂಗೀತ ರಸಸಂಜೆ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸಗ್ರಿನೋಳೆ ಅವರಿಂದ ನೃತ್ಯ ಭಜನೆ ನಡೆಯಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here