Home ಧಾರ್ಮಿಕ ಸುದ್ದಿ ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಜನಸಾಗರ

ದೇವಿಯ ದರ್ಶನಕ್ಕೆ ಹರಿದು ಬಂದ ಭಕ್ತ ಜನಸಾಗರ

ದೊಡ್ಡಣಗುಡ್ಡೆ ಶ್ರೀಕ್ಷೇತ್ರ ಆದಿಶಕ್ತಿ

1300
0
SHARE

ಉಡುಪಿ: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿಯ ಲಲಿತ ಪಂಚಮಿಯ ಪರ್ವ ಕಾಲದಲ್ಲಿ ಶ್ರೀ ಚಕ್ರಪೀಠ ಸುರಪೂಜಿತೆ, ಅತಿ ವಿಶೇಷವೂ ಅಪರೂಪವೂ ಆದ ಲಲಿತಾ ಸಹಸ್ರ ಕದಳಿ ಯಾಗವು ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ವೇ|ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾದಾರರಾದ ದಾಮೋದರ ಮತ್ತು ಹರಿಣಿ ದಾಮೋದರ ದಂಪತಿಯ ಮತ್ತು ಮಕ್ಕಳ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನೆರವೇರಿತು. ವಿಶಿಷ್ಟವಾಗಿ ಫ‌ಲಪ್ರದ ವಾಗಿರುವ ಈ ಮಹಾಯಾಗವನ್ನು ವೀಕ್ಷಿಸಲು ಬೆಳಗ್ಗಿನಿಂದಲೇ ಕ್ಷೇತ್ರದಲ್ಲಿ ಭಕ್ತರುಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದು, ತ್ರಿ ಮಧುರ ಯುಕ್ತವಾದ ಬಾಳೆಹಣ್ಣನ್ನು ಸಹಸ್ರ ಸಂಖ್ಯೆಗೂ ಅಧಿಕ ಸಂಖ್ಯೆಯಲ್ಲಿ ಜಪಿಸಿ ತ್ರಿ ಮಧುರ ಯುಕ್ತವಾಗಿ ಹೋಮಿಸಿ ಶ್ರೀ ಚಕ್ರ ರಾಜರಾಜೇಶ್ವರಿಯನ್ನು ಆರಾಧಿಸುವ ಈ ಮಹಾಯಾಗ ಬಹು ಫ‌ಲಪ್ರದವಾಗಿದೆ.

ಮಧ್ಯಾಹ್ನ ದುರ್ಗಾ ಆದಿಶಕ್ತಿ ದೇವಿಯನ್ನು ಮಧ್ಯಾಹ್ನದ ಮಹಾಪೂಜೆಯಲ್ಲಿ ಕಬ್ಬಿನ ಜಲ್ಲೆಯ ಮಧ್ಯೆ ಗಿಳಿ ಹಸಿರು ಬಣ್ಣದ ಸೀರೆಯನ್ನುಟ್ಟು ಲಲಿತಾಂಬಿಕೆ ಯಾಗಿ ಅಲಂಕರಿಸಲಾಗಿತ್ತು. ಸಹಸ್ರ ಸಂಖ್ಯೆಯಲ್ಲಿ ಭಕ್ತರುಗಳು ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡರು. ಕ್ಷೇತ್ರದ ವಿಶೇಷ ನೃತ್ಯ ಸೇವೆ ಪ್ರಕೃತಿ ಡಾನ್ಸ್‌ ಅಕಾಡೆಮಿ ದೊಡ್ಡಣ್ಣ ಗುಡ್ಡೆ ಉನ್ನತಿ ಸ್ವಾತಿ ಅವರಿಂದ ನೆರವೇರಿತು.

ಕ್ಷೇತ್ರದಲ್ಲಿ ಚಂಡಿಕಾ ಯಾಗ ಮುಂಬಯಿ ಉದ್ಯಮಿ ಸಂತೋಷ್‌ ಚೆನ್ನ ಮತ್ತು ರಜತ ಸಂತೋಷ್‌ ಜನ ದಂಪತಿಗಳಿಂದ ನೆರವೇರಿತು. ಕ್ಷೇತ್ರದ ವತಿಯಿಂದ ಗಾಯತ್ರಿ ಮಹಾಮಂತ್ರ ಪಾಯಸ ಯಾಗವು ಹಾಗೂ ಭಕ್ತರ ಪ್ರಾಯಶ್ಚಿತ್ತ ರೂಪದ ಕುಜ ಶಾಂತಿಯು ನೆರವೇರಿತು.

ಮೃಷ್ಟಾನ್ನ ಸಂತರ್ಪಣೆ: ಲಲಿತಾ ಸಹಸ್ರ ಕದಳಿ ಯಾಗವನ್ನು ಯಾಗದಲ್ಲಿ ಪಾಲ್ಗೊಳ್ಳಲು ಶ್ರೀ ಕ್ಷೇತ್ರಕ್ಕೆ ಬೆಳಗ್ಗಿನಿಂದಲೇ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದು, ದೇಗುಲದ ಸುತ್ತಮುತ್ತಲಿನ ಪ್ರದೇಶ ಭಕ್ತರಿಂದ ತುಂಬಿ ತುಳುಕುತ್ತಿತ್ತು. ವಿಶೇಷವಾಗಿ ರಚಿಸಲಾಗಿದ್ದ ಯಾಗ ಮಂಟಪದಲ್ಲಿ ಋುತ್ವಿಜರ ವೇದ ಘೋಷದೊಂದಿಗೆ ಯಾಗದ ಪೂರ್ಣಾಹುತಿ ನಡೆಯಿತು.

ಕ್ಷೇತ್ರದ ಮಹಾ ಪ್ರಸಾದವಾದ ಅನ್ನದಾನ ಸಹಸ್ರ ಸಂಖ್ಯೆಗೂ ಮೀರಿದ ಭಕ್ತರುಗಳಿಗೆ ಶಿಸ್ತುಬದ್ಧವಾಗಿ ರುಚಿಕಟ್ಟಾಗಿ ಉಣ ಬಡಿಸುವ ವ್ಯವಸ್ಥೆಯನ್ನು ಕ್ಷೇತ್ರದಲ್ಲಿ ಕಲ್ಪಿಸಲಾಗಿತ್ತು. ಏಕಕಾಲದಲ್ಲಿ ಕ್ಷೇತ್ರದ ಆದಿಶಕ್ತಿ ಸಭಾಭವನ ಅನ್ನಪೂರ್ಣ ಭೋಜನಾಲಯ ಹಾಗೂ ಸರಸ್ವತಿ ಭವನದಲ್ಲಿ ಅನ್ನ ಪ್ರಸಾದ ವಿತರಣೆ ನೆರವೇರಿತು. ಕ್ಷೇತ್ರದಲ್ಲಿ ನಿರಂತರ ಅನ್ನದಾನ ನಡೆಯುತ್ತಿದೆ .

LEAVE A REPLY

Please enter your comment!
Please enter your name here