Home ಧಾರ್ಮಿಕ ಸುದ್ದಿ ‘ಕಂಸನ ಸಂಕೇತ ನಾಶಗೊಂಡು ದೇಶ ಸುಭಿಕ್ಷೆಯಾಗಲಿ’

‘ಕಂಸನ ಸಂಕೇತ ನಾಶಗೊಂಡು ದೇಶ ಸುಭಿಕ್ಷೆಯಾಗಲಿ’

1271
0
SHARE

ಉಡುಪಿ: ಕಂಸನ ಸಂಕೇತದಂತಿರುವ ಕೆಟ್ಟ ಕಾಮನೆಗಳು ನಿವಾರಣೆಗೊಂಡು ದೇಶ ಸುಭಿಕ್ಷೆಯಾಗಲಿ ಎಂದು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀಕೃಷ್ಣಾಷ್ಟಮಿಯ ಪರ್ವಕಾಲದಲ್ಲಿ ಹಾರೈಸಿದರು.

ಶುಕ್ರವಾರ ರಾಜಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಕಂಸ ಕಾಲನೇಮಿ ಎಂಬ ಅಸುರ. ಆತ ಕಾಮ ಮತ್ತು ಕೋಪಕ್ಕೆ ಅಭಿಮಾನಿ. ಉಪವಾಸ ಮಾಡಿ ಶ್ರೀಕೃಷ್ಣನಿಗೆ ಅಘ್ಯರ್ ಕೊಡುವುದು ಇದೇ ಉದ್ದೇಶಕ್ಕೆ. ದೇಶದ ಅಭಿವೃದ್ಧಿಗೆ ತೊಡಕಾಗಿರುವ ಕಂಸನ ಪ್ರತೀಕಗಳಾದ ಉಗ್ರಗಾಮಿಗಳು ನಾಶ ಗೊಂಡು ದೇಶ ರಕ್ಷಣೆಯಾಗಲಿ ಎಂದರು.ಶ್ರೀಅದಮಾರು ಕಿರಿಯ ಶ್ರೀಈಶ ಪ್ರಿಯತೀರ್ಥ ಶ್ರೀಪಾದರು, ಶ್ರೀಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಉದ್ಯಮಿಗಳಾದ ಚೆನ್ನೈನ ಕೆ.ಲಕ್ಷ್ಮೀನಾರಾಯಣ ರಾವ್‌, ಕೆ. ರಾಮಪ್ರಸಾದ ಭಟ್ ಮುಖ್ಯ ಅತಿಥಿಗಳಾ ಗಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರಕುಮಾರ್‌, ಗಣ್ಯರಾದ ರತ್ನಕುಮಾರ್‌, ಇಂದ್ರಾಳಿ ಜಯಕರ ಶೆಟ್ಟಿ, ರಾಮಚಂದ್ರ ಉಪಾಧ್ಯ, ಈಶ್ವರ ಶೆಟ್ಟಿ ಚಿಟ್ಪಾಡಿ, ಉದ್ಯಮಿಗಳಾದ ಕಿಶೋರ್‌ ಆಳ್ವ, ಜಗದೀಶ ಪೈ, ಕೆ.ಮುರಳಿ ರಾವ್‌, ಪ್ರಸನ್ನ ಭಟ್, ಸುಚಿತ್ರಾ ರಾವ್‌, ನಂದಿನಿ ರಾವ್‌, ಚೆನ್ನೈ ನ್ಯಾಯವಾದಿ ಕೆ.ಪ್ರಹ್ಲಾದ ಆರ್‌. ಭಟ್ ಅವರನ್ನು ಸಮ್ಮಾನಿಸಲಾಯಿತು. ಹೆರ್ಗ ರವೀಂದ್ರ ಭಟ್ ಉಪನ್ಯಾಸ ನೀಡಿದರು. ರಾಜಕಮಲ್ ಮತ್ತು ಸಮೀರ್‌ ರಾವ್‌ ಅವರು ಕೊಳಲು ಜುಗಲ್ಬಂದಿ ನಡೆಸಿಕೊಟ್ಟರು. ಡಾ| ವಿಜಯೇಂದ್ರ ವಸಂತ್‌ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here