Home ಧಾರ್ಮಿಕ ಸುದ್ದಿ ಉಡುಪಿ: ಸಡಗರ ಸಂಭ್ರಮದ ಕ್ರಿಸ್ಮಸ್‌ ಆಚರಣೆ

ಉಡುಪಿ: ಸಡಗರ ಸಂಭ್ರಮದ ಕ್ರಿಸ್ಮಸ್‌ ಆಚರಣೆ

1251
0
SHARE

ಉಡುಪಿ: ನಗರಾದ್ಯಂತ ಕ್ರಿಸ್ಮಸ್‌ ಹಬ್ಬವನ್ನು ಬುಧವಾರ ಸಡಗರ- ಸಂಭ್ರಮದಿಂದ ಆಚರಿಸಲಾಯಿತು. ಸಾವಿರಾರು ಕ್ರೈಸ್ತ ಬಾಂಧವರು ಬೆಳಗ್ಗೆ ಚರ್ಚ್‌ಗಳಿಗೆ ತೆರಳಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಲ್ಯಾಣಪುರದ ಮಿಲಾಗ್ರಿಸ್‌ ಕೆಥೆಡ್ರಲ್‌ನ ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ರೆ| ಡಾ| ಜೆರಾಲ್ಡ… ಐಸಾಕ್‌ ಲೋಬೊ ಅವರು ಶಾಂತಿಧೂತ ಯೇಸುವಿನ ಶಾಂತಿಯ ಸಂದೇಶ ಪ್ರತಿಯೊಬ್ಬರ ಮನದಲ್ಲಿ ಮೂಡುವಂತಾಗಬೇಕು. ಈ ನಿಟ್ಟಿನಲ್ಲಿ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ. ದೇಶ-ವಿದೇಶ ಸೇರಿದಂತೆ ಎಲ್ಲ ಭಾಗದಲ್ಲೂ ಶಾಂತಿ ಸೌರ್ಹಾದಗಳು ಬೆಳೆಯಲಿ ಎಂದು ಸಂದೇಶ ನೀಡಿದರು.

ಹಬ್ಬದ ಹಿನ್ನೆಲೆಯಲ್ಲಿ ವರ್ಷಂಪ್ರತಿ ನಡೆಯುವಂತೆ ಡಿ.24ರಂದು ಮಧ್ಯರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆಗಳು ಜರಗಿದವು. ಡಿ.25 ರಂದು ಬೆಳಗ್ಗೆ ಪ್ರಾರ್ಥನೆ ನಡೆಯಿತು. ಉಡುಪಿ ಶೋಕಮಾತಾ ಇಗರ್ಜಿ, ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ…, ಸಂತೆಕಟ್ಟೆ ಮೌಂಟ್‌ ರೋಸರಿ ಚರ್ಚ್‌, ಕಲ್ಮಾಡಿ ಸ್ಟೆÇÉಾ ಮೇರಿಸ್‌ ಮೊದಲಾದ ಚರ್ಚ್‌ಗಳಿಗೆ ಕ್ರೈಸ್ತ ಬಾಂಧವರು ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

ವಿವಿಧ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಕೆ
ಕಲ್ಯಾಣಪುರದ ಮಿಲಾಗ್ರಿಸ್‌ ಕೆಥೆಡ್ರಲ್‌ ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ರೆ| ಡಾ| ಜೆರಾಲ್ಡ… ಐಸಾಕ್‌ ಲೋಬೊ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಬಳಿಕ ಹಬ್ಬದ ಸಂದೇಶ ಸಾರಲಾಯಿತು. ಉಡುಪಿಯ ಶೋಕಮಾತಾ ಚರ್ಚ್‌ನಲ್ಲಿ ಮಂಗಳವಾರ ರಾತ್ರಿಯಿಂದ ಹಬ್ಬದ ವಾತಾವರಣ ಕಲೆಗಟ್ಟಿತ್ತು. ಕ್ರಿಸ್ಮಸ್‌ ಗೀತೆ ಸಂದೇಶಗಳನ್ನು ನಟನೆ ಮೂಲಕ ಪ್ರಸ್ತುತಪಡಿಸಲಾಯಿತು. ಬಳಿಕ ರೆ| ಫಾ| ವಲೇರಿಯನ್‌ ಮೆಂಡೊನ್ಸಾ ಬಲಿಪೂಜೆ ನೆರವೇರಿಸಿ, ಸಂದೇಶ ನೀಡಿದರು. ಬುಧವಾರ ಬೆಳಗ್ಗೆ ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ನಿತ್ಯದ ಬಲಿಪೂಜೆ ನೆರವೇರಿತು. ಉಡುಪಿ ಧರ್ಮಪ್ರಾಂತ್ಯದ ಬಿಷಪ್‌ ರೆ| ಡಾ| ಜೆರಾಲ್ಡ… ಐಸಾಕ್‌ ಲೋಬೊ ಅವರು ಭಾಗವಹಿಸಿ ಶಾಂತಿಯ ಸಂದೇಶ ನೀಡಿದರು. ಕ್ರೈಸ್ತರು ನೆರೆಹೊರೆಯವರೊಂದಿಗೆ ಪರಸ್ಪರ ಕ್ರಿಸ್ಮಸ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಪೆರಂಪಳ್ಳಿಯ ಮಾತಾ ಫಾತಿಮಾ ಚರ್ಚ್‌ನ ಫಾ| ಅನಿಲ್‌ ಡಿ’ಸೋಜಾ, ರೆ| ಫಾ| ರಿಜಿನಾಲ್ಡ್‌ ಪಿಂಟೋ ಅವರ ನೇತೃತ್ವದಲ್ಲಿ ಬೆಳಗ್ಗೆ 8 ಗಂಟೆಗೆ ವಿಶೇಷ ಪ್ರಾರ್ಥನೆ, ಯೇಸುವಿನ ಜೀವನ ಚರಿತ್ರೆಯನ್ನು ತಿಳಿಸಲಾಯಿತು. ಸುಮಾರು ನಾಲೂ°ರಕ್ಕೂ ಹೆಚ್ಚಿನ ಕ್ರೈಸ್ತರು ಪ್ರಾರ್ಥನೆಯಲ್ಲಿ ಭಾಗಿಯಾದರು.

ಮಿಷನ್‌ ಕಂಪೌಂಡ್‌ ಬಳಿಯ ಬಾಸೆಲ್‌ ಮಿಷನ್‌ ಜುಬಲಿ ಚರ್ಚ್‌ನಲ್ಲಿ ರೆ| ಜೋಸೆಫ್ ಪ್ರಭಾಕರ್‌ ಪ್ರಾರ್ಥನೆ ಹಾಗೂ ಹಬ್ಬದ ಸಂದೇಶ ನೀಡಿದರು. ನೂರಾರು ಭಕ್ತರು ಹೊಸ ಉಡುಗೆ-ತೊಡುಗೆ ತೊಟ್ಟು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಅಪರಾಹ್ನ ಶಾಲಾ ಮಕ್ಕಳಿಂದ ಕ್ರಿಸ್ತ ಜಯಂತಿ ಸಂದೇಶ, ಮನೋರಂಜನ ಕಾರ್ಯಕ್ರಮ, ನಾಟಕ ಪ್ರದರ್ಶನ ನಡೆಯಿತು.

ಕೊಳಲಗಿರಿಯ ಸೇಕ್ರೇಡ್‌ ಹಾರ್ಟ್‌ ಚರ್ಚ್‌ನಲ್ಲಿ ಕ್ರಿಸ್ಮಸ್‌ ಹಬ್ಬದ ಆಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಮಂಗಳವಾರ ರಾತ್ರಿಯ ವೇಳೆಯಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಐಸಿವೈಎಂ ಯುವಜನರಿಂದ ಕ್ರಿಸ್ಮಸ್‌ ಕ್ಯಾರೊಲ್‌ ಗಳನ್ನು ಹಾಡಿ ಯೇಸು ಕ್ರಿಸ್ತರ ಜನನವನ್ನು ಕಂದ ಯೇಸುವಿಗೆ ನಮಿಸಿ ಅನಂತರ ಬಲಿಪೂಜೆಯನ್ನು ನೆರವೇರಿಸಲಾಯಿತು.

ಪ್ರಧಾನ ಗುರುಗಳಾಗಿ ಜೆಪ್ಪು ಸೈಂಟ್‌ ಜೋಸೆಫ್ ಸೆಮಿನರಿಯ ಸುಪೀರಿಯರ್‌ ರೆ| ಫಾ| ಡಾ| ರೋನಾಲ್ಡ… ಸೆರಾವೂ, ಅವರೊಂದಿಗೆ ಚರ್ಚಿನ ಧರ್ಮಗುರುಗಳಾದ ಫಾ| ಅನಿಲ್‌ ಪ್ರಕಾಶ್‌ ಕ್ಯಾಸ್ಟೆಲಿನೂ, ಫಾ| ರೋಮನ್‌ ಮಸ್ಕರೇನ್ಹಸ್‌ ನೆರವೇರಿಸಿದರು. ಬಲಿಪೂಜೆಯ ಅನಂತರ ವಿವಿಧ ಮನೋರಂಜನಾ ಕಾರ್ಯಕ್ರಮವನ್ನು ಕೆಥೋಲಿಕ್‌ ಸಭಾ ಘಟಕದ ಮುಖಾಂತರ ನಡೆಯಿತು. ಸಹಸ್ರಾರು ಭಕ್ತರು ನೆರೆದಿದ್ದರು. ಬುಧವಾರ ಬೆಳಗ್ಗೆ ವಿಶೇಷ ಪ್ರಾರ್ಥನೆ ಹಬ್ಬದ ಸಂದೇಶವನ್ನು ನೀಡಿ ಬಳಿಕ ಸಿಹಿತಿಂಡಿಯನ್ನು ವಿತರಿಸಲಾಯಿತು.

ಸಾವಿರಾರು ಮಂದಿ ಭಾಗಿ
ಮಂಗಳವಾರದಿಂದಲೇ ನಗರಾದ್ಯಂತ ಚರ್ಚ್‌ಗಳು ವಿದ್ಯುತ್‌ ಆಲಂಕಾರದಿಂದ ಶೃಂಗಾರಗೊಂಡಿದ್ದವು. ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಪ್ರೀತಿಗೆ ಪಾತ್ರನಾದ ಸಾಂತಾಕ್ಲಾಸ್‌ ವೇಷ, ಭಕ್ತರಿಗೆ ಕ್ರಿಸ್ಮಸ್‌ ಕೇಕ್‌ ವಿತರಣೆ ನಡೆಯಿತು. ನಗರಾದ್ಯಂತ ಸಾವಿರಾರು ಮಂದಿ ಕ್ರೈಸ್ತ ಬಾಂಧವರು ಮಂಗಳವಾರ ರಾತ್ರಿಯಿಂದಲೇ ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಬುಧವಾರ ಬೆಳಗ್ಗೆ ಭಕ್ತರು ಹೊಸ ಉಡುಪು ಧರಿಸಿ ಪ್ರಾರ್ಥನೆ ಹಾಗೂ ಪರಸ್ಪರ ಶುಭಾಶಯ ವಿನಿಮಯ ಮಾಡಿ ಸಂಭ್ರಮಾಚರಿಸಿದರು.

ಶಾಂತಿ ಮಂತ್ರ
ಯೇಸು ಹುಟ್ಟಿದ ಈ ದಿನ ಕತ್ತಲೆ ಕಳೆದು ಬೆಳಕಿನ ಉದಯ ಕಂಡ ದಿನ. ಶಾಂತಿದೂತ ಯೇಸುವಿನ ಶಾಂತಿ ಮಂತ್ರ ಪ್ರಪಂಚದೆಲ್ಲೆಡೆ ಜನರು ಉತ್ತಮ ಜೀವನ ಪಡೆಯುವಂತಾಗಲಿ.
-ರೆ| ಫಾ| ವಲೇರಿಯನ್‌ ಮೆಂಡೊನ್ಸಾ,
ಉಡುಪಿ ಶೋಕಮಾತಾ ಚರ್ಚ್‌

LEAVE A REPLY

Please enter your comment!
Please enter your name here