ಉಡುಪಿ: ಉಡುಪಿಯ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೈದರಾಬಾದ್ನ ಕಾಚಿಗುಡ-ಲಿಂಗಂಪಳ್ಳಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಜು. 27ರಿಂದ ಸೆ. 14ರ ವರೆಗೆ ಚಾತುರ್ಮಾಸ ವ್ರತ ಕೈಗೊಳ್ಳಲಿದ್ದಾರೆ.
ಈ ಅವಧಿಯಲ್ಲಿ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ನಾಗರ ಪಂಚಮಿ, ಶ್ರೀ ರಾಘವೇಂದ್ರ ಗುರುಗಳಆರಾಧನ ಮಹೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ, ನೂಲ ಹುಣ್ಣಿಮೆ, ಗಣೇಶ ಚತುರ್ಥಿ,ಅನಂತನ ಚತುರ್ದಶಿ ಸೇರಿದಂತೆ ಹಲವು ಹಬ್ಬಗಳು, ಅನೇಕ ಪ್ರಸಿದ್ಧ ವಿದ್ವಾಂಸರಿಂದ ಪ್ರವಚನಗಳು ನಡೆಯಲಿವೆ ಎಂದು ಶ್ರೀಮಠದ ಪ್ರಕಟನೆ ತಿಳಿಸಿದೆ.