Home ಧಾರ್ಮಿಕ ಸುದ್ದಿ ಶ್ರೀ ಕಾಶೀ ಮಠಾಧೀಶರ ಚಾತುರ್ಮಾಸ ವ್ರತಾರಂಭ

ಶ್ರೀ ಕಾಶೀ ಮಠಾಧೀಶರ ಚಾತುರ್ಮಾಸ ವ್ರತಾರಂಭ

1129
0
SHARE
ಸಂಸ್ಥಾನದ ಪಟ್ಟದ ದೇವರಿಗೆ ಸ್ವಾಮೀಜಿಯವರು ವಿಶೇಷ ಅಭಿಷೇಕ ನಡೆಸಿದರು.

ಉಡುಪಿ: ಶ್ರೀ ಸಂಸ್ಥಾನ ಶ್ರೀ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ವ್ರತವು ಕೋಟ ಶ್ರೀ ಕಾಶೀ ಮಠದಲ್ಲಿ ಸೋಮವಾರ ಆರಂಭಗೊಂಡಿತು.

ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆ,ರಕ್ಷತ್ರಯ ಹವನ, ಸಾನ್ನಿಧ್ಯ ಹವನವು ವೈದಿಕ ವೃಂದದವರ ನೇತೃತ್ವದಲ್ಲಿ ನಡೆಯಿತು. ಇದೇ ವೇಳೆ ಶ್ರೀಗಳು ತಪ್ತಮುದ್ರಾಧಾರಣೆ ನಡೆಸಿದರು. ರಾತ್ರಿ ಪೂಜೆಯ ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.

ಚಾತುರ್ಮಾಸ್ಯ ಸಮಿತಿಯ ದಾಮೋದರ ಶೆಣೈ ಕುಂದಾಪುರ, ವೆಂಕಟೇಶ ಹರಿಪ್ರಭು, ರಮೇಶ್‌ ಪಡಿಯಾರ್‌, ನರಸಿಂಹ ಪ್ರಭು, ಕೆ.ರಾಧಾಕೃಷ್ಣ, ವಾಸುದೇವ ನಾಯಕ್‌, ವೇದವ್ಯಾಸ ಪೈ, ಶ್ರೀಕಾಂತ ಶೆಣೈ, ಅರವಿಂದ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here