Home ಧಾರ್ಮಿಕ ಸುದ್ದಿ ಬನ್ನಂಜೆ ಶ್ರೀ ಶನಿಕ್ಷೇತ್ರ ಫೆ. 15ರಂದು ಶನೈಶ್ಚರ ಉತ್ಸವ

ಬನ್ನಂಜೆ ಶ್ರೀ ಶನಿಕ್ಷೇತ್ರ ಫೆ. 15ರಂದು ಶನೈಶ್ಚರ ಉತ್ಸವ

589
0
SHARE

ಉಡುಪಿ : ಬನ್ನಂಜೆ ಶ್ರೀ ಶನಿಕ್ಷೇತ್ರದಲ್ಲಿರುವ ಶ್ರೀ ಶನಿದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಫೆ. 15ರಂದು ವಾರ್ಷಿಕ ಶನೈಶ್ಚರ ಉತ್ಸವ ನೆರವೇರಲಿದೆ.

ಶ್ರೀ ಶನೈಶ್ಚರ ಸ್ವಾಮಿಯ ಪ್ರೀತ್ಯರ್ಥವಾಗಿ ಶ್ರೀ ಬನ್ನಂಜೆ ರಾಘವೇಂದ್ರತೀರ್ಥ ಶ್ರೀಪಾದರ ಮಾರ್ಗ ದರ್ಶನದಲ್ಲಿ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಮಂಡಲ ಪೂಜೆ, ಷೋಡಶೋಪಚಾರ ಪೂಜಾ ಸಹಿತ ದೀಪಾರಾಧನೆ, ಪಲ್ಲಕಿ ಉತ್ಸವ, ದರ್ಶನ ಬಲಿ ನಡೆಯಲಿದೆ.

ದ್ವಾದಶ ರಾಶಿಯಲ್ಲಿ ಶ್ರೀ ಶನೈಶ್ಚರ ಸ್ವಾಮಿಯು ಸಂಚರಿಸುವಾಗ ಉಂಟಾಗಬಹುದಾದ ಸಕಲ ದುರಿತ ನಿವಾರಣೆ ಹಾಗೂ ಎಲ್ಲ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರ ಕೈಯಿಂದಲೇ ಶ್ರೀ ಶನೈಶ್ಚರ ಸ್ವಾಮಿಗೆ ತೈಲಾಭಿಷೇಕ ಮಾಡಿಸಿ ಕಪ್ಪು ಬಟ್ಟೆ, ಕಬ್ಬಿಣ, ತಿಲ ದಾನಾದಿ ಪ್ರಾಯಶ್ಚಿತ್ತಗಳನ್ನು ಮಾಡಿಸಿ, ಎಲ್ಲ ಭಕ್ತರಿಂದ ಸಾಮೂಹಿಕ ಜಪ, ತಿಲದೀಪಾರಾಧನೆ (ಎಳ್ಳುಗಂಟು ದೀಪೋತ್ಸವ) ನೆರವೇರಿಸಲಾಗುವುದು.

ಬೆಳಗ್ಗೆ 5.30ಕ್ಕೆ ಉಷಃಕಾಲ ಪೂಜೆ, 6.30ಕ್ಕೆ ಸೂರ್ಯೋದಯ ಪೂಜೆ, ಬೆಳಗ್ಗೆ 8ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಸಗ್ರಹ ಶನಿಶಾಂತಿಗರ್ಭಿತ ಶ್ರೀ ಲಕ್ಷ್ಮೀನರಸಿಂಹ ಮಂತ್ರಯಾಗ, 11ಕ್ಕೆ ಪೂರ್ಣಾಹುತಿ, 11.15ಕ್ಕೆ ಶ್ರೀ ಶನೈಶ್ಚರ ಉತ್ಸವ ಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಸೂರ್ಯಾಸ್ತ ಬಲಿ, ಉತ್ಸವ ಬಲಿ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here