Home ಧಾರ್ಮಿಕ ಸುದ್ದಿ ಸಂಘಟನೆಯಿಂದ ಕಠಿನ ಸಮಸ್ಯೆಗಳೂ ದೂರ: ಪಲಿಮಾರು ಶ್ರೀ

ಸಂಘಟನೆಯಿಂದ ಕಠಿನ ಸಮಸ್ಯೆಗಳೂ ದೂರ: ಪಲಿಮಾರು ಶ್ರೀ

ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಧಾರ್ಮಿಕ ಸಭೆ

384
0
SHARE

ಉಡುಪಿ : ಸಂಘಟನ ಶಕ್ತಿಯಿಂದ ಎಂತಹ ಕಠಿನವಾದ ಸಮಸ್ಯೆಯನ್ನೂ ಲೀಲಾಜಾಲವಾಗಿ ಬಗೆಹರಿಸಲು ಸಾಧ್ಯವಿದೆ ಎನ್ನುವುದಕ್ಕೆ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಒಂದು ಉದಾಹರಣೆ. ಅಯ್ಯಪ್ಪ ಕ್ಷೇತ್ರಕ್ಕೆ ಬಂದೊದಗಿದ ಸಮಸ್ಯೆಯನ್ನು ಪರಿಹರಿಸಲು ಪಣತೊಟ್ಟ ಈ ಸಂಘಟನೆಯು ನ್ಯಾಯಾಲಯವನ್ನೇ ನಡುಗಿಸಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ಉಡುಪಿ ಜಿಲ್ಲಾ ಶ್ರೀ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ವತಿಯಿಂದ ರಥಬೀದಿಯಲ್ಲಿ ರವಿವಾರ ನಡೆದ ಶ್ರೀ ಅಯ್ಯಪ್ಪ ಭಕ್ತರ ಬೃಹತ್‌ ಸಂಕೀರ್ತನ ಶೋಭಾಯಾತ್ರೆಯ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಶ್ರೀಪಾದರು ಆಶೀರ್ವಚನ ನೀಡಿದರು.

ಸ್ವಾಗತ ಸಮಿತಿ ಜಿಲ್ಲಾ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್‌ ಮಲ್ಪೆ ಅಧ್ಯಕ್ಷತೆ ವಹಿಸಿದ್ದರು. ಎಬಿವಿಪಿ ಮಂಗಳೂರು ವಿಭಾಗದ ಪ್ರಮುಖ ಕೇಶವ ಬಂಗೇರ, ರಾಜ್ಯಾಧ್ಯಕ್ಷ ವಿ. ಕೃಷ್ಣಪ್ಪ ಬೆಂಗಳೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಕೃಷ್ಣಯ್ಯ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಹರೀಶ್‌ ರಾಮ್‌ ಬನ್ನಂಜೆ, ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಗುರುಸ್ವಾಮಿ ಕಾರ್ಕಳ, ಕಾರ್ಯಾಧ್ಯಕ್ಷ ಬಾಲಕೃಷ್ಣ ಗುರುಸ್ವಾಮಿ ಮಲ್ಪೆ, ಜತೆಕಾರ್ಯದರ್ಶಿ ಕೃಷ್ಣ ಆಚಾರ್‌ ಮೂಡುಬೆಳ್ಳೆ, ಸಂಘಟನ ಕಾರ್ಯದರ್ಶಿ ಪ್ರಕಾಶ್‌ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಗಣೇಶ್‌ ಕೋಟ, ಉದ್ಯಮಿ ಆನಂದ ಪಿ. ಸುವರ್ಣ, ವಲಯಾಧ್ಯಕ್ಷರಾದ ಧನಂಜಯ ಮಲ್ಪೆ, ಹರೀಶ್‌ ಶೆಟ್ಟಿ ಕಲ್ಯಾ, ಬಾಬು ಶೆಟ್ಟಿ, ಗೋಪಾಲ ಗುರುಸ್ವಾಮಿ, ಭೋಜರಾಜ ಕಿದಿಯೂರು ಉಪಸ್ಥಿತರಿದ್ದರು.

ಅಧ್ಯಕ್ಷ ರಾಧಾಕೃಷ್ಣ ಮೆಂಡನ್‌ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಂಜಿತ್‌ ಶೆಟ್ಟಿ ಹಾವಂಜೆ ಅವರು ವಂದಿಸಿದರು.

LEAVE A REPLY

Please enter your comment!
Please enter your name here