ಉಡುಪಿ: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮೂರು ದಿನಗಳ ಆರಾಧನೋತ್ಸವ ರವಿವಾರ ಸಮಾಪನಗೊಂಡಿತು.
ಶುಕ್ರವಾರದಿಂದ ಆರಂಭಗೊಂಡ ಆರಾಧನೋತ್ಸವ ರವಿವಾರದ ವರೆಗೆ ವಿವಿಧ ಕಡೆ ಇರುವ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಿಗಳಲ್ಲಿ ನಡೆಯಿತು.
ಉಡುಪಿ, ಕೊಡವೂರು, ಉಚ್ಚಿಲ, ಪಡುಬಿದ್ರಿ ಮೊದಲಾದೆಡೆ ಇರುವ ರಾಘವೇಂದ್ರ ಸ್ವಾಮಿಗಳ ಮಠಗಳನ್ನು ಹೂವು, ವಿದ್ಯುದ್ದೀಪಗಳಿಂದ ಅಲಂಕರಿಸ ಲಾಗಿತ್ತು.
ಮೂರು ದಿನಗಳಲ್ಲಿ ವೈದಿಕರು ವೃಂದಾವನ ಸನ್ನಿಧಿಗೆ ಪಂಚಾಮೃತ ಅಭಿಷೇಕ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ಪಾರಾಯಣಾದಿಗಳನ್ನು ನಡೆಸಲಾಯಿತು. ಸಾವಿರಾರು ಭಕ್ತರಿಗೆ ಅನ್ನಪ್ರಸಾದದ ವಿತರಣೆ ನಡೆಯಿತು. ರಾಯರ ಮಠಗಳು ಭಕ್ತರಿಂದ ಕಿಕ್ಕಿರಿದಿತ್ತು. ಶನಿವಾರ ಸಂಜೆ ರಾಘವೇಂದ್ರ ಸ್ವಾಮಿಗಳ ಪೂರ್ವಾವತಾರ ಪ್ರಹ್ಲಾದರಾಜರಿಗೆ ರಥೋತ್ಸವ ಜರಗಿತು.