Home ಧಾರ್ಮಿಕ ಸುದ್ದಿ ಅಕ್ಷಯ ತೃತೀಯಾ; ಇಬ್ಬರು ಶ್ರೀಗಳ ಸರಳ ಆರಾಧನೆ

ಅಕ್ಷಯ ತೃತೀಯಾ; ಇಬ್ಬರು ಶ್ರೀಗಳ ಸರಳ ಆರಾಧನೆ

472
0
SHARE
ಕಣ್ವತೀರ್ಥ ಮಠದಲ್ಲಿ ಶ್ರೀ ವಿಜಯಧ್ವಜತೀರ್ಥರ ಆರಾಧನೆ ಮತ್ತು ಬಾರಕೂರಲ್ಲಿ ಶ್ರೀ ಸುರೋತ್ತಮತೀರ್ಥರ ಆರಾಧನೆ ನಡೆಯಿತು.

ಉಡುಪಿ: ರವಿವಾರ ಅಕ್ಷಯ ತೃತೀಯಾದಂದು ಇಬ್ಬರು ಸಾಧಕ ಸ್ವಾಮೀಜಿಯವರ ಆರಾಧನೋತ್ಸವ ಸರಳವಾಗಿ ನಡೆಯಿತು.

ಮಂಗಳೂರಿನಿಂದ ಸುಮಾರು 20 ಕಿ.ಮೀ. ದೂರದ ಕೇರಳದ ಗಡಿ ತಲಪಾಡಿ ಸಮೀಪದ ಕಣ್ವತೀರ್ಥ ಮಠದಲ್ಲಿ ಪೇಜಾವರ ಮಠದ ಪರಂಪರೆಯಲ್ಲಿ ಆರನೆಯವರಾದ ಶ್ರೀ ವಿಜಯಧ್ವಜ ತೀರ್ಥರ ಆರಾಧನೋತ್ಸವದ ಪೂಜೆಯನ್ನು ಅರ್ಚಕ ರಮೇಶ ಉಪಾಧ್ಯಾಯ ನಡೆಸಿದರು. ಅಲ್ಲಿ ವಿಜಯಧ್ವಜತೀರ್ಥರ ಮೂಲ ವೃಂದಾವನವಿದ್ದು ಅದಕ್ಕೆ ಪೂಜೆ ನಡೆಸಲಾಯಿತು. ಅಲ್ಲಿ ಸಮೀಪವೇ ದ್ವಂದ್ವಮಠದ ಕಟ್ಟೆ ಇರುವುದರಿಂದ ಮತ್ತು ವೃಂದಾವನ ಸಮೀಪದ ಅಶ್ವತ್ಥವೃಕ್ಷದ ಗಾತ್ರವನ್ನು ಕಂಡಾಗ ಇದು ಮಧ್ವಾಚಾರ್ಯರ ಕಾಲಕ್ಕಿಂತಲೂ ಹಿಂದಿನದೆಂದು ತಿಳಿದುಬರುತ್ತದೆ.

ಬಾರಕೂರು ಸಮೀಪದ ಭಂಡಾರಕೇರಿ ಮಠದಲ್ಲಿ ಶ್ರೀ ವಾದಿರಾಜ ಸ್ವಾಮಿಗಳ ಪೂರ್ವಾಶ್ರಮದ ಸಹೋದರ ಶ್ರೀ ಸುರೋತ್ತಮತೀರ್ಥರ ಆರಾಧನೆ ಪ್ರಯುಕ್ತ ಸುರೋತ್ತಮ ತೀರ್ಥರ ವೃಂದಾವನಕ್ಕೆ ಅರ್ಚಕ ಶ್ರೀಹರಿ ಪೂಜೆ ಸಲ್ಲಿಸಿದರು.

ವಿಜಯಧ್ವಜತೀರ್ಥರು ಸಮಗ್ರ ಶ್ರೀಮದ್ಭಾಗವತ ಪುರಾಣಕ್ಕೆ ಟಿಪ್ಪಣಿಯನ್ನು ಬರೆದ ಕಾರಣ ಉತ್ತರ ಭಾರತದಲ್ಲಿಯೂ ಇವರ ಟಿಪ್ಪಣಿ ಅಧ್ಯಯನದವೇಳೆ ರೆಫ‌ರೆನ್ಸ್‌ ಆಗಿ ಬಳಕೆಯಾಗು ತ್ತಿದೆ. ಸುರೋತ್ತಮ ತೀರ್ಥರು ವಾದಿರಾಜತೀರ್ಥರ ಮೂರು ಮಹಾನ್‌ ಕೃತಿಗಳಿಗೆ ಟಿಪ್ಪಣಿ ಯನ್ನು ಬರೆದಿದ್ದರು.

ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥರು ಜೀವಿತಾವಧಿಯಲ್ಲಿ ಎಲ್ಲಿಯೇ ಸಂಚಾರದಲ್ಲಿದ್ದರೂ ಅಕ್ಷಯ ತೃತೀಯಾದಂದು ಕಣ್ವತೀರ್ಥ ಮಠಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಪರ್ಯಾಯ ಅವಧಿಯಲ್ಲಿ ಮಾತ್ರ ಶ್ರೀ ವಿಶ್ವಪ್ರಸನ್ನತೀರ್ಥರು ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಭಂಡಾರಕೇರಿ ಮಠದ ಶ್ರೀ ವಿದ್ಯಾಮಾನ್ಯತೀರ್ಥರು, ಬಳಿಕ ಶ್ರೀ ವಿದ್ಯೆàಶತೀರ್ಥರು ತಪ್ಪದೆ ಭಂಡಾರಕೇರಿ ಮಠಕ್ಕೆ ತೆರಳಿ ಸುರೋತ್ತಮತೀರ್ಥರ ವೃಂದಾವನಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಪ್ರಾಯಃ ಇದೇ ಮೊದಲ ಬಾರಿ ಇಬ್ಬರೂ ಸ್ವಾಮೀಜಿಯವರು ಕೊರೊನಾ ಕಾರಣದಿಂದ ಬೆಂಗಳೂರಿನಿಂದ ಬರಲು ಆಗದೆ ಅರ್ಚಕರೇ ಪೂಜೆ ಸಲ್ಲಿಸಿದರು. ಪೇಜಾವರ ಶ್ರೀಗಳು ಬೆಂಗಳೂರಿನ ವಿದ್ಯಾಪೀಠದಲ್ಲಿ ಮತ್ತು ಭಂಡಾರಕೇರಿ ಶ್ರೀಗಳು ಬೆಂಗಳೂರು ಗಿರಿನಗರ ಮಠದಲ್ಲಿ ಪೂಜೆ ಸಲ್ಲಿಸಿದರು. ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪೂಜೆಗಳನ್ನು ನಡೆಸಿದರು.

LEAVE A REPLY

Please enter your comment!
Please enter your name here