Home ಧಾರ್ಮಿಕ ಸುದ್ದಿ ಉಡುಪಿ ಶ್ರೀ ಅನಂತೇಶ್ವರ ದೇಗುಲ , ಫೆ. 20 – 27: ಶಿವರಾತ್ರಿ ಉತ್ಸವ

ಉಡುಪಿ ಶ್ರೀ ಅನಂತೇಶ್ವರ ದೇಗುಲ , ಫೆ. 20 – 27: ಶಿವರಾತ್ರಿ ಉತ್ಸವ

815
0
SHARE

ಉಡುಪಿ : ಶ್ರೀ ಅನಂತೇಶ್ವರ ದೇಗುಲದಲ್ಲಿ ಫೆ. 20ರಿಂದ ಫೆ. 27ರ ವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಜರಗಲಿದೆ.

ಫೆ. 20ರ ರಾತ್ರಿ ಬಲಿ, ಅಂಕುರಾರೋಹಣ, ಫೆ. 21ರ ಮಹಾಶಿವರಾತ್ರಿಯಂದು ಧ್ವಜಾರೋಹಣ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶಿವರಾತ್ರಿ ಪೂಜೆ, ರಂಗಪೂಜೆ, ಫೆ. 21ರಿಂದ ಫೆ. 26ರ ವರೆಗೆ ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ, ಫೆ. 25ರಂದು ಮಹಾಪೂಜೆ, ರಥಾರೋಹಣ ನಡೆದು ಮಹಾರಥೋತ್ಸವ ನಡೆಯಲಿದೆ.

ಫೆ. 26ರಂದು ಕವಾಟೋದ್ಘಾಟನೆ, ಮಹಾಮಂತ್ರಾಕ್ಷತೆ, ಫೆ. 27ರಂದು ಮಹಾಸಂಪ್ರೋಕ್ಷಣೆ ಜರಗಲಿದೆ. ಪ್ರತಿದಿನ ಭಜನೆ, ಧಾರ್ಮಿಕ ಪ್ರವಚನ,
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇಗುಲದ ಆಡಳಿತ ಮೊಕ್ತೇಸರರಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here