Home ಧಾರ್ಮಿಕ ಸುದ್ದಿ ಅದಮಾರು ಪರ್ಯಾಯ ಮಹೋತ್ಸವ

ಅದಮಾರು ಪರ್ಯಾಯ ಮಹೋತ್ಸವ

ಮಲ್ಪೆ ವಲಯ ಮೀನುಗಾರರಿಂದ ಹೊರೆಕಾಣಿಕೆ ಸಮರ್ಪಣೆ

2245
0
SHARE

ಮಲ್ಪೆ: ಸಮುದ್ರ ಮತ್ತು ಕೃಷ್ಣನಿಗೆ ನಿಕಟ ನಂಟು. ಮೀನುಗಾರರು ಮತ್ತು ಶ್ರೀ ಕೃಷ್ಣ ಮಠಕ್ಕೆ ಹಿಂದಿನಿಂದಲೂ ಅವಿನಾಭಾವ ಸಂಬಂಧ. ಉಡುಪಿ ಮಠದ ಯಾವುದೇ ಉತ್ಸವ, ಕಾರ್ಯಕ್ರಮಗಳಿರಲಿ, ಮೀನುಗಾರರ ಸೇವೆ ನಿರಂತರವಾಗಿರುತ್ತದೆ ಎಂದು ಪರ್ಯಾಯ ಪೀಠ ವನ್ನೇರಲಿರುವ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.

ಅವರು ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ವಿವಿಧ ಭಜನಾ ಮಂದಿರ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಲ್ಪೆ ವಲಯದ ಪರ್ಯಾಯಾದ ಪ್ರಥಮ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಹೊರೆಕಾಣಿಕೆ ಉಸ್ತುವಾರಿಯನ್ನು ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ವಹಿಸಿದ್ದರು.

ಶಾಸಕ ಕೆ. ರಘುಪತಿ ಭಟ್‌, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಮೀನುಗಾರ ಮುಖಂಡರುಗಳಾದ ಆನಂದ ಸಿ. ಕುಂದರ್‌, ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್‌, ಸಾಧು ಸಾಲ್ಯಾನ್‌, ರಾಮಚಂದ್ರ ಕುಂದರ್‌, ಸುಧಾಕರ ಕುಂದರ್‌, ರಮೇಶ್‌ಕೋಟ್ಯಾನ್‌, ದಯಾನಂದ ಕುಂದರ್‌, ಬೇಬಿ ಎಚ್‌. ಸಾಲ್ಯಾನ್‌, ಜಲಜ ಕೋಟ್ಯಾನ್‌, ಗುಂಡು ಬಿ. ಅಮೀನ್‌, ಸತೀಶ್‌ ಕುಂದರ್‌, ಮೀನುಗಾರ ಇಲಾಖೆಯ ಉಪ ನಿರ್ದೇìಶಕ ಗಣೇಶ್‌ ಕೆ., ಸಹಾಯಕ ನಿರ್ದೇಶಕ ಶಿವ ಕುಮಾರ್‌, ಭಜನಾ ಒಕ್ಕೂಟದ ಅಧ್ಯಕ್ಷ ಭೋಜರಾಜ್‌ ಆರ್‌. ಕಿದಿಯೂರು, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ, ಮಲ್ಪೆ ಬಿಲ್ಲವ ಸೇವಾ ಸಂಘದಅಧ್ಯಕ್ಷ ಕೃಷ್ಣಪ್ಪ ಜತ್ತನ್‌, ತಾ. ಪಂ. ಸದಸ್ಯ ಶರತ್‌ ಕುಮಾರ್‌, ವಿವಿಧ ಭಜನಾ ಮಂಡಳಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಮಲ್ಪೆ ಬಂದರಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ 10 ಟನ್‌ ಅಕ್ಕಿ, 3ಟನ್‌ ಬೆಲ್ಲ, 10 ಸಾವಿರ ತೆಂಗಿನಕಾಯಿ, 1000ಲೀಟರ್‌ ತೆಂಗಿನ ಎಣ್ಣೆ ಹಾಗೂ ಮಲ್ಪೆ ವಲಯದ ವಿವಿಧ ಭಜನಾ ಮಂದಿರ, ಸಂಘ ಸಂಸ್ಥೆಗಳ ವತಿಯಿಂದಲೂ ಹೊರೆಕಾಣಿಕೆ ಸಮರ್ಪಣೆಗೊಂಡಿತ್ತು.

ಹೊರೆಕಾಣಿಕೆ ಸೇವೆಯಿಂದ ಶ್ರೀಕೃಷ್ಣ ಸಂಪ್ರೀತನಾಗಿ, ಹೇರಳ ಮತ್ಸ್ಯ ಸಂಪತ್ತನ್ನು ಒದಗಿಸಲಿ, ನಾಡಿಗೆ ಸುಭೀಕ್ಷೆಯನ್ನು ನೀಡಲಿ ಎಂದು ಪರ್ಯಾಯ ಪೀಠವನ್ನೇರಲಿರುವ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶಿರ್ವಚನ ನೀಡಿದರು.

LEAVE A REPLY

Please enter your comment!
Please enter your name here