ಉಡುಪಿ: ಪರ್ಯಾಯ ಮಹೋತ್ಸವದ ಸಂಭ್ರಮದಲ್ಲಿರುವ ಶ್ರೀಕೃಷ್ಣ ಮಠದ ಆವರಣ ಅಲಂಕೃತಗೊಂಡು ಭಕ್ತ ಸಮೂಹವನ್ನು ಆಕರ್ಷಿಸುತ್ತಿದೆ.
ಅದಮಾರು ಮಠದಲ್ಲಿ ಮಹಿಳೆಯರು ಅಲಂಕಾರಕ್ಕೆ ಬೇಕಿರುವ ಹೂಗಳನ್ನು ಕಟ್ಟುವ ಕಾರ್ಯದಲ್ಲಿ ಶುಕ್ರವಾರ ನಿರತರಾಗಿದ್ದರು. ಭಜನೆಗಳನ್ನು ಹಾಡುತ್ತ ಹೂಗಳನ್ನು ಜೋಡಿಸುವ ಕಾರ್ಯವನ್ನು ನಡೆಸಿದರು. ಮಠದ ಒಳಗಿನ ಗುಡಿಯ ಸುತ್ತ ವಿವಿಧ ಬಗೆಯ ಹೂಗಳಿಂದ ಅಲಂಕಾರಗೊಳಿಸಿ ಸಿದ್ಧಪಡಿಸುವ ಕಾರ್ಯಗಳು ಭರದಿಂದ ನಡೆದವು. ಪರ್ಯಾಯ ಮಹೋತ್ಸವಕ್ಕೆ ಬೇಕಿರುವ ಹಣ್ಣು ಹಂಪಲುಗಳನ್ನು ಅಚ್ಚುಕಟ್ಟಾಗಿ ಆವರಣದಲ್ಲಿ ಜೋಡಿಸಿಡುವ ಕೆಲಸಗಳು ನಡೆದವು.