ಮಲ್ಪೆ : ಮಹಾಭಾರತ ಯುದ್ಧದಲ್ಲಿ ಧರ್ಮ ಬೀರುಗಳಾದ ಪಾಂಡವರ ರಕ್ಷಣೆಗೆ ಶ್ರೀಕೃಷ್ಣ ಪರಮಾತ್ಮ ಅರ್ಜುನನ ಸಾರಥಿಯಾಗಿ ಅವರ ರಕ್ಷಣೆ ಮಾಡಿದ. ಅಂತೆಯೇ ನಮ್ಮನ್ನು ನಾವು ಶ್ರೀ ಕೃಷ್ಣನಿಗೆ ಸಮರ್ಪಿಸಿದಾಗ ನಮಗೆ ಶ್ರೀ ಕೃಷ್ಣ ಸಾರಥಿಯಾಗಿ ನಮ್ಮನ್ನು ಮುನ್ನಡೆಸಿ ರಕ್ಷಿಸುತ್ತಾನೆ. ಪ್ರಕೃತಿಯ ಮಡಿಲಲ್ಲಿ ಆರಾಧಿಸಲ್ಪಡುವ ಶ್ರೀ ದೇವಿಯ ಈ ಕ್ಷೇತ್ರವನ್ನು ಕಂಡಾಗ ಇದು ಕಾರಣಿಕ ಶಕ್ತಿ ಕೇಂದ್ರ ಎಂದು ಮನಸ್ಸಿಗೆ ಭಾಸವಾಗುತ್ತದೆ ಎಂದು ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಅವರು ಉದ್ಯಾವರ ಸಂಪಿಗೆನಗರ ಶ್ರೀ ನಾಗ ಬ್ರಹ್ಮಸ್ಥಾನ ಶ್ರೀ ಅನ್ನ ಪೂರ್ಣೇಶ್ವರಿ ದೇವಸ್ಥಾನ ಶ್ರೀ ನಿತ್ಯಾನಂದ ಮಂದಿರದ ಜೀರ್ಣೋದ್ಧಾರದ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋನ್ಸೆ ಲಕ್ಷ್ಮೀಕಾಂತ್ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್ ಕಿದಿಯೂರು, ಉದಯ ಕುಮಾರ್ ಶೆಟ್ಟಿ ಕಿದಿಯೂರು, ದಿವಾಕರ ಶೆಟ್ಟಿ ತೋಟದಮನೆ ಕೊಡವೂರು, ಸದಾನಂದ ಸಾಲ್ಯಾನ್ ವಡಭಾಂಡೇಶ್ವರ ಬೈಲಕರೆ, ಸದಾಶಿವ ಕೋಟ್ಯಾನ್ ಸಂಪಿಗೆನಗರ, ಮಾತೃಮಂಡಳಿಯ ಅಧ್ಯಕ್ಷೆ ಭಾರತಿ ಸುರೇಂದ್ರ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಶಶಿ ಶೆಟ್ಟಿ ಗೋವಾ ಸ್ವಾಗತಿಸಿದರು. ಜಯ ಶಂಕರ್ ಕುತ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶ್ಮಿತಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ವಂದಿಸಿದರು.