Home ಧಾರ್ಮಿಕ ಕಾರ್ಯಕ್ರಮ ಶಿಲಾಮಯ ದೇಗುಲ ಸಮರ್ಪಣೆ, ಬಿಂಬ ಪುನಃಪ್ರತಿಷ್ಠೆ

ಶಿಲಾಮಯ ದೇಗುಲ ಸಮರ್ಪಣೆ, ಬಿಂಬ ಪುನಃಪ್ರತಿಷ್ಠೆ

ಉಂಡಾರು ವಿಷ್ಣುಮೂರ್ತಿ ದೇವಸ್ಥಾನ

1555
0
SHARE

ಕಾಪು: ಸುಮಾರು 6ಕೋ. ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನಃ ನಿರ್ಮಾಣಗೊಂಡಿರುವ ಉಂಡಾರು ವಿಷ್ಣುಮೂರ್ತಿ ದೇವಸ್ಥಾನದ ನೂತನ ದೇಗುಲ ಸಮರ್ಪಣೆ, ವಿಷ್ಣುಮೂರ್ತಿ,
ಮುಖ್ಯಪ್ರಾಣ ದೇವರ ಬಿಂಬ ಪ್ರತಿಷ್ಠೆಯು ಎ. 20ರಂದು ನಡೆಯಿತು.

ಉಂಡಾರು ದೇಗುಲದ ಆಡಳಿತೆದಾರ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ, ವೇ| ಮೂ| ಪುತ್ತೂರು ಮಧುಸೂದನ ತಂತ್ರಿ ಮತ್ತು ಅವಧಾನಿ ಸುಬ್ರಹ್ಮಣ್ಯ ಭಟ್‌ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.

ಸೋದೆ ಮಠದ ದಿವಾನರಾದ ಶ್ರೀನಿವಾಸ ತಂತ್ರಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಐ. ರಮೇಶ್‌ ಮಿತ್ತಂತಾಯ, ನವೀನ್‌ ಅಮೀನ್‌ ಶಂಕರಪುರ, ಲಕ್ಷ್ಮಣ್‌ ಶೆಟ್ಟಿ, ಕಾರ್ಯದರ್ಶಿ ನಂದನ್‌ ಕುಮಾರ್‌, ಕೋಶಾಧಿಕಾರಿ ವಿ. ಜಿ. ಶೆಟ್ಟಿ, ಚಂದ್ರಹಾಸ ಗುರುಸ್ವಾಮಿ, ಪದಾಧಿಕಾರಿಗಳಾದ
ರವಿವರ್ಮ ಶೆಟ್ಟಿ, ಉದಯ್‌ ಶೆಟ್ಟಿ, ಡಾ| ಶ್ರೀನಿವಾಸ ಭಟ್‌, ಚಂದ್ರಹಾಸ ಶೆಟ್ಟಿ ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here