Home ಧಾರ್ಮಿಕ ಸುದ್ದಿ ಉಚ್ಚಿಲ ದೇಗುಲ: ವಿಜ್ಞಾಪನಾ ಪತ್ರ ಬಿಡುಗಡೆ

ಉಚ್ಚಿಲ ದೇಗುಲ: ವಿಜ್ಞಾಪನಾ ಪತ್ರ ಬಿಡುಗಡೆ

1112
0
SHARE

ಪಡುಬಿದ್ರಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ಬಲಿಮೂರ್ತಿಗೆ ಸುವರ್ಣ ಅಟ್ಟೆ ಪ್ರಭಾವಳಿ ನಿರ್ಮಾಣದ ಸಂಬಂಧವಾಗಿ ವಿಜ್ಞಾಪನಾ ಪತ್ರವನ್ನು ಡಿ. 21ರಂದು ಹರಿ ಹರರ ಸಮಾಗಮದ ವಿಶೇಷ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಎರ್ಮಾಳು ಶ್ರೀಜನಾರ್ದನ ದೇವಸ್ಥಾನದ ದೇವರ ಅವಭೃತ ಸ್ನಾನಕ್ಕಾಗಿ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ಸರೋವರಕ್ಕೆ ಆಗಮಿಸುವ ವೇಳೆ ಹರಿ – ಹರರಿಗೆ ಜತೆಯಾಗಿ ಏಕ ಕಾಲದಲ್ಲೇ ಪೂಜೆಯಾಗುವ ವಿಶೇಷ ಸಂದರ್ಭದ ಬಳಿಕ ಈ ವಿಜ್ಞಾಪನಾ ಪತ್ರವನ್ನು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ಸಮ್ಮುಖದಲ್ಲಿ ಎರಡೂ ದೇಗುಲಗಳ ತಂತ್ರಿಗಳಾದ ವೇ| ಮೂ| ಕಂಬಳಕಟ್ಟ ಸುರೇಂದ್ರ ಉಪಾಧ್ಯಾಯ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಯು. ಸೀತಾರಾಮ ಭಟ್, ಎರ್ಮಾಳು ಬೀಡು ಅಶೋಕರಾಜ, ಉದ್ಯಮಿಗಳಾದ ನಾರಾಯಣ ಶೆಟ್ಟಿ ನೈಮಾಡಿ, ಸುರೇಶ್‌ ಶೆಟ್ಟಿ ರಾಮ್‌ದೇವ್‌ ಎರ್ಮಾಳು, ಬಗ್ಗೇಡಿಗುತ್ತು ಯಶೋಧರ ಶೆಟ್ಟಿ, ವಿಶುಕುಮಾರ್‌, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದ್ಯುಮಣಿ ಆರ್‌. ಭಟ್, ಕಿಶೋರ್‌ ಶೆಟ್ಟಿ, ನಾರಾಯಣ ಬೆಲ್ಚಡ, ಗಣೇಶ ಮೇಸ್ತ್ರಿ, ಸುಲೋಚನಾ ದೇವಾಡಿಗ ಹಾಗೂ ಊರ, ಭಕ್ತಾದಿಗಳು, ನೌಕರ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here