ಮಂಗಳವಾರ, ಶುಕ್ರವಾರಗಳು ಶ್ರೀದೇವಿಗೆ ಸಂಬಂದಿಸಿದ ದಿನಗಳು. ವಿಶೇಷವಾಗಿ ಸಂಪತ್ತಿನ ಅಧಿದೇವತೆ ಲಕ್ಷ್ಮಿಗೆ ಸಂಬಂಧಪಟ್ಟಿರುವ ದಿನಗಳು. ದೇವಿ ಮಂಗಲಕಾರಲು. ಆಕೆ ಕಲ್ಯಾಣೀ. ಮನೆಯನ್ನು ಬೆಳಗುವುದೂ ಸಮೃದ್ಧಿಯನ್ನು ತರುವುದೂ ಶ್ರೀದೇವಿಯೇ. ವಿವಿಧ ಸ್ವರೂಪಗಳಲ್ಲಿ ಆಕೆಯಿದ್ದರೂ ಭಕ್ತಿ, ಕರ್ಮಾ, ಜ್ಞಾನಗಳಿಗೆ ಅಧಿದೇವತೆಯಾಗಿ ಮುನ್ನಡೆಸುವವಳು. ರೂಪ, ಜಯ , ಯಶಸ್ಸು ಮುಂತಾದ ಲೌಕಿಕ ಸಮೃದ್ಧಿಗಳನ್ನು ಆಕೆ ಒದಗಿಸುವಬವಳು. ಸರಸ್ವತಿ, ಲಕ್ಷ್ಮಿ ಹಾಗೂ ಖಾಲಿಯಾಗಿ ಸೃಷ್ಟಿ ಸ್ಥಿತಿ ಲಯಗಳ ಹಿಂದಿನ ಶಕ್ತಿಯಾಗಿರುವವಳು. ಆದುದರಿಂದ ಆ ದಿನಗಳಲ್ಲಿ ಧನ ಅಥವಾ ಇತರ ಸಂಪತ್ತನ್ನು ಮನೆಯಿಂದ ಹೊರನೀಡಬಾರದು ಎಂದು ನಂಬಿಕೆಯಿದೆ. ಹಾಗೆ ಮನೆಯ ಮಗಳನ್ನು ಅಥವಾ ಸೊಸೆಯನ್ನು ಮನೆಯಿಂದ ಈ ದಿನಗಳಲ್ಲಿ ಕಳುಹಿಸಿಕೊಡುವುದಿಲ್ಲ. ಯಾವುದೇ ನೂತನ ವಸ್ತುಗಳನ್ನು ಮನೆಗೆ ತರುವಾಗ ಶುಕ್ರವಾರ ವಿಶೇಷವಾಗಿ ಪ್ರಶಸ್ತ ಎನ್ನುತ್ತಾರೆ. ಈ ದಿನಗಳಲ್ಲಿ ಮನೆಗೆ ವಸ್ತುಗಳನ್ನು ತಂದರೆ ಅವು ಹೆಚ್ಚುತ್ತವೆ. ಮನೆಯಿಂದ ಹೊರಗೆ ನೀಡಿದರೆ ಅವು ಕ್ಷೀಣಿಸುತ್ತದೆ ಎನ್ನುವುದು ನಂಬಿಕೆ.