Home ಧಾರ್ಮಿಕ ಸುದ್ದಿ ಕುಡುಪು ದೇವಸ್ಥಾನಕ್ಕೆ ಬಂಡಿ ಹಸ್ತಾಂತರ

ಕುಡುಪು ದೇವಸ್ಥಾನಕ್ಕೆ ಬಂಡಿ ಹಸ್ತಾಂತರ

1487
0
SHARE

ಮಹಾನಗರ: ಕುಡುಪು ಶ್ರೀ ಅನಂತ ಪದ್ಮನಾಭ ದೇವರ ಸವಾರಿಗಾಗಿ ನೂತನವಾಗಿ ನಿರ್ಮಿಸಿದ ಬಂಡಿಯವನ್ನು ಡಿ. 5ರಂದು ಹಿರಿಯಡಕದಲ್ಲಿ ಭೂಸ್ಪರ್ಶ ನಡೆಸಲಾಯಿತು. ರಥಶಿಲ್ಪಿಗಳಿಂದ ರಥ ಹಸ್ತಾಂತರ ಹಾಗೂ ಭೂಸ್ಪರ್ಶ ಕಾರ್ಯಕ್ರಮ ನಡೆಯಿತು.

ರಥಶಿಲ್ಪಿ ಹಿರಿಯಡಕ ಗಣೇಶ್‌ ಆಚಾರ್ಯ ಮತ್ತು ಬಳಗ, ಶ್ರೀ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿಗಳು, ಪ್ರಧಾನ ತಂತ್ರಿ, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ
ಸದಸ್ಯರು, ಭಕ್ತರ ಸಮ್ಮುಖದಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯಿತು.

ಡಿ. 7ರಂದು ಶ್ರೀ ಕ್ಷೇತ್ರಕ್ಕೆ ತಲುಪಲಿದ್ದು, ಡಿ. 9ರಂದು ಸಂಜೆ ಪ್ರಥಮ ವಾಹನೋತ್ಸವ ನೆರವೇರಲಿದೆ. ಮೇಯರ್‌ ಭಾಸ್ಕರ ಕೆ., ಕ್ಷೇತ್ರದ ಪ್ರಮುಖರಾದ ಕೃಷ್ಣರಾಜ ತಂತ್ರಿ, ಕುಡುಪು
ವಾಸುದೇವ ರಾವ್‌, ಅರವಿಂದ ಅಯ್ಯಪ್ಪ, ಸಂತಗುಂಡಿ, ಬಾಲಕೃಷ್ಣ ಕಾರಂತ, ಮನೋಹರ ಭಟ್‌, ಉದಯಕುಮಾರ್‌, ಉದಯ ರಾವ್‌, ಚಂದ್ರಯ್ಯ ಆಚಾರ್ಯ, ಪ್ರಭಾಕರ ಭಟ್‌, ಅರವಿಂದ ತಂತ್ರಿ, ವಿಜಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here