ಕೊಕ್ಕಡ : ಕೊಕ್ಕಡದ ಕಂಪಕೋಡಿ ಶ್ರೀ ರಾಜನ್ ದೈವ, ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿರುವ 1 ಲಕ್ಷ ರೂ. ದೇಣಿಗೆಯನ್ನು ದೈವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಕ್ಕಡ ವಲಯ ಮೇಲ್ವಿಚಾರಕ ಆದಿತ್ಯ, ಉಪ್ಪಾರಪಳಿಕೆ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ, ಹಿರಿಯ ವೈದ್ಯ ಡಾ| ಮೋಹನ್ ದಾಸ್ ಗೌಡ, ಕುಂಞಪ್ಪ ಗೌಡ, ಕೆ.ವಿ. ಕರ್ಕೆರ, ಕೊಕ್ಕಡ ಸೇವಾ ಸ. ಬ್ಯಾಂಕಿನ ಅಧ್ಯಕ್ಷ ನಾರಾಯಣ ಗೌಡ, ಶ್ರೀನಾಥ್, ಶಿವಾನಂದ ಎಸ್., ಜಗದೀಶ್ ಕೆ., ಯಶೋಧರ, ಧರ್ಣಪ್ಪ
ಪೂಜಾರಿ, ಗೋಪಾಲ ನಲ್ಕೆ, ಗಿರಿಯಪ್ಪ ಗೌಡ, ಕೊರಗಪ್ಪ, ಚಂದ್ರಶೇಖರ, ವಿಶ್ವನಾಥ ಉಪಸ್ಥಿತರಿದ್ದರು.