Home ಧಾರ್ಮಿಕ ಸುದ್ದಿ ತೋನ್ಸೆ-ಗುಡ್ಯಾಂ ಶ್ರೀ ಭದ್ರಕಾಳಿ ಮಹಾಮಾರಿಕಾಂಬಾ ದೇಗುಲ

ತೋನ್ಸೆ-ಗುಡ್ಯಾಂ ಶ್ರೀ ಭದ್ರಕಾಳಿ ಮಹಾಮಾರಿಕಾಂಬಾ ದೇಗುಲ

1580
0
SHARE

ಉಡುಪಿ: ಕೆಮ್ಮಣ್ಣು ತೋನ್ಸೆಯ ಗುಡ್ಯಾಂ ಶ್ರೀ ಭದ್ರಕಾಳಿ ಮಹಾಮಾರಿಕಾಂಬಾ ದೇಗುಲದಲ್ಲಿ ಅ. 10 – 19ರ ವರೆಗೆ ಶರನ್ನವರಾತ್ರಿ ಉತ್ಸವ ನೆರವೇರಲಿದೆ. ಅ. 18ರ ಸಂಜೆ 6ರಿಂದ ದುರ್ಗಾ ನಮಸ್ಕಾರ ಪೂಜೆ, ಪುಷ್ಪಾಲಂಕಾರ ಸೇವೆ, ಅ.19ರ ಬೆಳಿಗ್ಗೆ 7.30ರಿಂದ ದುರ್ಗಾ ಪಾರಾಯಣ ಸೇವೆ, ವಾಹನ ಪೂಜೆ, ವಿಜಯದಶಮಿ ಪೂಜೆ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಅ. 10ರ ಸಂಜೆ 6ರಿಂದ ಶ್ರೀ ವಿಷ್ಣು ಭಜನ ಮಂಡಳಿ ಎರ್ಮಾಳು (ಬಡಾ) ಅವರಿಂದ ಭಜನೆ, ಸಂಜೆ 7.30ರಿಂದ “ಚಾ ಪರ’ ಕಲಾವಿದರಿಂದ ತುಳು ಹಾಸ್ಯ ನಾಟಕ “ಪನಿಯರೆ ಆವಂದಿನ’, ಅ. 11ರಂದು ಜಗದ್ಗುರು ಶ್ರೀ ಬಬ್ಬುಸ್ವಾಮಿ ಭಜನ ಮಂಡಳಿ ನೇಜಾರು ಅವರಿಂದ ಭಜನೆ, ಅ. 12ರಂದು ಶ್ರೀ ಹನುಮಾನ್‌ ವಿಠೊಭ ಭಜನ ಮಂಡಳಿ ಹೂಡೆ ಅವರಿಂದ ಭಜನೆ, ಅ. 13ರ ಸಂಜೆ 6ರಿಂದ ಶ್ರೀ ನಾಗೇಶ್ವರೀ ಭಜನ ಮಂಡಳಿ ಬಾರಕೂರು ಅವರಿಂದ ಭಜನೆ, ರಾತ್ರಿ 7.30ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯವೈವಿಧ್ಯ, ಅ. 14ರ ಸಂಜೆ 6ರಿಂದ ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿ ಗುಜ್ಜರಬೆಟ್ಟು ಅವರಿಂದ ಭಜನೆ, ರಾತ್ರಿ 7.30ರಿಂದ ಸ್ಥಳೀಯ ಮಕ್ಕಳಿಂದ ವಿವಿಧ ವಿನೋದಾವಳಿ, ಅ. 15ರಂದು ಶ್ರೀರಾಮ ಭಜನ ಮಂಡಳಿ ಪಡುತೋನ್ಸೆ ಅವರಿಂದ ಭಜನೆ, ಅ. 16ರ ಸಂಜೆ 6ರಿಂದ ಶ್ರೀದೇವಿ ಭಜನ ಮಂಡಳಿ ಗದ್ದಿಗೆ ಅವರಿಂದ ಭಜನೆ, ರಾತ್ರಿ 7.30ಕ್ಕೆ ಸುಮತಿ ಆಚಾರ್ಯ ಕೆಮ್ಮಣ್ಣು ಮತ್ತು ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅ. 17ರ ಸಂಜೆ 6ರಿಂದ ಕರಾವಳಿ ಭಜನ ಮಂಡಳಿ ಒಕ್ಕೂಟ ಅವರಿಂದ ಭಜನೆ, ರಾತ್ರಿ 7.30ರಿಂದ ಸತೀಶ್‌ ಬನ್ನಂಜೆ ಮತ್ತು ಬಳಗದವರಿಂದ ರಸಮಂಜರಿ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here