Home ಧಾರ್ಮಿಕ ಸುದ್ದಿ ಪಣೆಮಜಲು: ಇಂದು ದೈವಗಳ ನೇಮ

ಪಣೆಮಜಲು: ಇಂದು ದೈವಗಳ ನೇಮ

424
0
SHARE

ಕಡಬ : ಇಲ್ಲಿನ ಪಣೆಮಜಲು ಶ್ರೀ ಸಬ್ಬಮ್ಮ ದೇವಿ ಸನ್ನಿಧಿಯಲ್ಲಿ ಮಾ. 26ರಂದು ದೈವಗಳ ನೇಮ ನಡೆಯಲಿದೆ. ಸೋಮವಾರ ಸಂಜೆ 7.30ರಿಂದ ದೈವಗಳ ಭಂಡಾರ ಇಳಿಸಿ ಮಾಲ್ಪೆ ಮಾಡದಲ್ಲಿ ಭಂಡಾರ ಏರುವುದು, ರಾತ್ರಿ 9ರಿಂದ ಅನ್ನಸಂತರ್ಪಣೆ, ರಾತ್ರಿ 10ರಿಂದ ಶ್ರೀ ಮಲೆ ಉಳ್ಳಾಕ್ಲು ಹಾಗೂ ಸಪರಿವಾರ ದೈವಗಳ ನೇಮ ಪ್ರಾರಂಭಗೊಳ್ಳಲಿದೆ. 27ರಂದು ಬೆಳಗ್ಗೆ ಗಂಟೆ 7.30ಕ್ಕೆ ಶ್ರೀ ಮಲೆ ಚಾಮುಂಡಿ ಪ್ರಧಾನಿ ದೈವದ ನೇಮ ಮತ್ತು ಹರಿಕೆ ಸಲ್ಲಿಕೆ ಹಾಗೂ ಗಡಿಗೆ ಹೋಗುವುದು. ಮಧ್ಯಾಹ್ನ ಗಂಟೆ 12.30ರಿಂದ ಕಡಬದ ಪಂಜುರ್ಲಿ ದೈವದ ನೇಮ. ಅಪರಾಹ್ನ 2ರಿಂದ ನೇಮ ಮುಗಿದು ಭಂಡಾರವು ಭಂಡಾರ ಚಾವಡಿಗೆ ಹಿಂದಿರುಗುವುದು ಎಂದು ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದೈವಗಳ ನೇಮಕ್ಕೆ ಪೂರ್ವಭಾವಿಯಾಗಿ ಕೆಂಚಭಟ್ರೆ ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯರ ನೇತೃತ್ವದಲ್ಲಿ ರವಿವಾರ ಬೆಳಗ್ಗೆ ಶ್ರೀ ನಾಗದೇವರಿಗೆ ತಂಬಿಲ ಹಾಗೂ ಶ್ರೀ ಸಬ್ಬಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿತು. ಶ್ರೀ ಉಳ್ಳಾಕ್ಲ ಉದ್ಭವ ಸ್ಥಳ ಕಲ್ಮಲ ಗುಡ್ಡೆಯಲ್ಲಿ ದೈವಗಳಿಗೆ ಪೇರಾರಿ ಇಟ್ಟು ಪ್ರಾರ್ಥನೆ ನಡೆಯಿತು. ತುಂಬೆತ್ತಡ್ಕದಲ್ಲಿ ಶ್ರೀ ಪುರುಷದೈವ, ಜುನ್ರೋಳು ಹಾಗೂ ಗುರುಕಾರ್ನರವರಿಗೆ ಅಗೇಲು ಹಾಕಲಾಯಿತು. ಮುಖ್ಯಸ್ಥ ಜನಾರ್ದನ ಗೌಡ ಪಣೆಮಜಲು, ನೇಮ ಸಮಿತಿಯ ಅಧ್ಯಕ್ಷ ಗಣಪಯ್ಯ ಗೌಡ ಅಂಙಣ, ಉಪಾಧ್ಯಕ್ಷರಾದ ಅಚ್ಯುತ ಗೌಡ ಅಂಙಣ ಹರಿಹರ, ಸುಂದರ ಗೌಡ ಅಂಙಣ, ಧರ್ಮಪಾಲ ಗೌಡ ಅಂಙಣ ಐನೆಕಿದು, ಕಾರ್ಯದರ್ಶಿ ನಾರಾಯಣ ಗೌಡ ಪಣೆಮಜಲು, ಜತೆ ಕಾರ್ಯದರ್ಶಿ ಹರಿಪ್ರಸಾದ್‌ ಪಣೆಮಜಲು, ಕೋಶಾಧಿಕಾರಿ ಕೇಶವ ಗೌಡ ಪಣೆಮಜಲು, ಸದಸ್ಯರಾದ ರಮೇಶ ಗೌಡ ತುಂಬೆತ್ತಡ್ಕ, ನೇಮಣ್ಣ ಗೌಡ ನಡುವಳಿಕೆ, ಚಿದಾನಂದ ಗೌಡ ದೇವುಪಾಲು, ಲಿಂಗಪ್ಪ ಗೌಡ ಕೆರೆಮುದೇಲು, ಹರಿಶ್ಚಂದ್ರ ಕುಜುಂಬಾರು, ಕೃಷ್ಣಪ್ಪ ಪೂಜಾರಿ ಬೈಲಂಗಡಿ, ಜನಾರ್ದನ ಗೌಡ ಪಣೆಮಜಲು, ಸೂರಪ್ಪ ಗೌಡ ಕೆರೆಮುದೇಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here