Home ಧಾರ್ಮಿಕ ಸುದ್ದಿ ಇಂದು ದೇವರ ಅಷ್ಟಬಂಧ ಪ್ರತಿಷ್ಠೆ

ಇಂದು ದೇವರ ಅಷ್ಟಬಂಧ ಪ್ರತಿಷ್ಠೆ

1844
0
SHARE

ಬೆಳ್ತಂಗಡಿ : ಮುಂಡಾಜೆ ಭಾರ್ಗವ ನಗರದ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಬುಧವಾರ ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ವಿವಿಧ ವೈದಿಕ ಕಾರ್ಯಕ್ರಮ, ಗಣಪತಿ, ಅನ್ನಪೂರ್ಣೇಶ್ವರೀ, ನವಗ್ರಹ, ಪರಶುರಾಮ ದೇವರ ಬಿಂಬ ಶುದ್ಧಿ, ಅಧಿವಾಸ ಪೂಜೆ, ಪ್ರತಿಷ್ಠಾದಿ ಅಧಿವಾಸಾದಿ ಹೋಮಗಳು ನಡೆದವು. ಈ ಸಂದರ್ಭ ಬ್ರಹ್ಮಕಲಶ ಸಮಿತಿ ಯವರು, ಜೀರ್ಣೋದ್ಧಾರ ಸಮಿತಿ ಯವರು, ಆಡಳಿತ ಮೊಕ್ತೇಸರರು, ವಿವಿಧ ಸಮಿತಿ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.

ಇಂದಿನ ಕಾರ್ಯಕ್ರಮ ಎ. 19ರಂದು ಬೆಳಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ನವಗ್ರಹ ಪ್ರತಿಷ್ಠೆ, ಅನ್ನಪೂರ್ಣೇಶ್ವರೀ ಪ್ರತಿಷ್ಠಾಪನೆ, ಬೆಳಗ್ಗೆ 11.5ಕ್ಕೆ ಶ್ರೀ ಪರಶುರಾಮ ದೇವರ
ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಕಾರ್ಯಗಳು ನಡೆಯಲಿವೆ. ಬೆಳಗ್ಗೆ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಶುಭಾಶಂಸನೆ ಗೈಯಲಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಾಯ ಅಡೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್‌ ಭಟ್‌, ಶ್ರೀ ಕುಕ್ಕೆ ಸುಬ್ರಹ್ಮಣ್ಯ
ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ – ಶ್ರೀ ಭಾರ್ಗವ ವಿಜಯ, ಕೀರ್ತನಾ ಭಜನ ತಂಡ ಮುಂಡಾಜೆ ಇವರಿಂದ ಭಜನೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.

LEAVE A REPLY

Please enter your comment!
Please enter your name here