Home ಧಾರ್ಮಿಕ ಕಾರ್ಯಕ್ರಮ ಇಂದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ

ಇಂದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ

1217
0
SHARE

ಪುಂಜಾಲಕಟ್ಟೆ : ಪುರಾಣ ಪ್ರಸಿದ್ಧ ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾ| ಕಾವಳಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಡೆಯ ಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿ ಹಾಗೂ ಪ್ರಧಾನ ಅರ್ಚಕ ವೇ| ಮೂ| ನಟರಾಜ ಉಪಾಧ್ಯಾಯ ಅವರ ಸಹಕಾರದಲ್ಲಿ ಬೆಳಗ್ಗೆ 6.50ಕ್ಕೆ ಶ್ರೀ ಕಾರಿಂಜೇಶ್ವರ ದೇವರಿಗೆ ಮತ್ತು ಶ್ರೀ ಪಾರ್ವತಿ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಸಂಜೆ ರಂಗಪೂಜೆ, ಉತ್ಸವ, ದೈವಗಳಿಗೆ ಗಗ್ಗರ ಸೇವೆ, ರಥೋತ್ಸವ ನಡೆಯಲಿದೆ.

ತತ್ತ್ವ ಕಲಶಾಭಿಷೇಕ
ರವಿವಾರ ಬ್ರಹ್ಮಕಲಶ ಮಂಡಲ ರಚನೆ, ತತ್ತ್ವ ಕಲಶಾಭಿಷೇಕ ಇತ್ಯಾದಿ ವೈದಿಕ ಕಾರ್ಯಕ್ರಮಗಳು ನಡೆದವು. ಶ್ರೀ ಈಶ್ವರ ಸನ್ನಿಧಿಯಲ್ಲಿ ಗಣಪತಿ ಯಾಗ, ನವಕ ಕಲಶಾಭಿಷೇಕ, ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಮೋದಕ ಯಾಗ ನಡೆಯಿತು.

LEAVE A REPLY

Please enter your comment!
Please enter your name here