Home ಧಾರ್ಮಿಕ ಸುದ್ದಿ ಬಜಪ್ಪಿಲ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರೆ, ನೇಮ

ಬಜಪ್ಪಿಲ ಕ್ಷೇತ್ರದಲ್ಲಿ ಕಾಲಾವಧಿ ಜಾತ್ರೆ, ನೇಮ

531
0
SHARE

ಮಂಡೆಕೋಲು : ಮಂಡೆಕೋಲು ಗ್ರಾಮದ ಬಜಪ್ಪಿಲ ಶ್ರೀ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ತೊಡಕ (ಕಾಲಾವಧಿ) ಜಾತ್ರೆ ಮೂರು ದಿನಗಳ ಕಾಲ ನಡೆಯಿತು.

ಡಿ. 27ರಂದು ಶ್ರೀ ಉಳ್ಳಾಕುಲು ದೈವದ ನೇಮ ಹಾಗೂ ಡಿ. 28ರಂದು ಧೂಮಾವತಿ ಮತ್ತು ಪರಿವಾರ ದೈವಗಳ ನೇಮ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಹೇಮಂತ್‌ ಕುಮಾರ್‌ ಗೌಡರಮನೆ, ಪ್ರಮುಖರಾದ ಉಳ್ಳಾಕುಲು ಪೂಜಾರಿ ದಿನೇಶ್‌ ರೈ, ನರಸಿಂಗ ರೈ, ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ, ಜಯರಾಮ ಗೌಡರಮನೆ, ಬಾಳೆಕೋಡಿ ಹರಿಪ್ರಸಾದ್‌, ಬಾಳೆಕೋಡಿ ಕೇಶವ, ಜಯರಾಮ ಬಾಳೆಕೋಡಿ, ಸಂಜೀವ ಬಳೆಂದೋಟಿ, ಪ್ರವೀಣ್‌ ಬಾಳೆಕೋಡಿ, ಅಣ್ಣಪ್ಪ ಮೂಲೆ, ವೇಣುಗೋಪಾಲ ಕುಕ್ಕುಡೇಲು, ಮನಮೋಹನ ಕಾಜಿಗುಂಡಿ, ದಿಲೀಪ್‌ ಕುಮಾರ್‌ ಮುಡೂರು, ಕೌಶಿಕ್‌ ಗೌಡರ ಮನೆ, ಭಾಸ್ಕರ ಮಿತ್ತಪೇರಾಲು, ದಾಮೋದರ ಮಿತ್ತಪೇರಾಲು, ಜಗನ್ನಾಥ ಪಡ್ಡೆ„ಬನ, ರಾಮಣ್ಣ ಮೂಲೆ, ಲಕ್ಷ್ಮಣ ಗೌಡ ಕುಕ್ಕೆಟ್ಟಿ, ವೆಂಕಟ್ರಮಣ ಅತ್ಯಾಡಿ, ಮೋನಪ್ಪ ನಾರಾಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here