ಮಲ್ಪೆ: ವಡಭಾಂಡೇಶ್ವರ ತೊಟ್ಟಂ ಶ್ರೀ ಪಂಡರೀನಾಥ ಭಕ್ತಿ ಉದಯ ಭಜನ ಮಂದಿರದ ಶ್ರೀ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಪಾಣಿಪೀಠಕ್ಕೆ ರಜತ ಕವಚ, ರಜತ ಪ್ರಭಾವಳಿ, ಶ್ರೀ ದೇವರಿಗೆ ರಜತ ಕವಚ, ನೂತನ ಜ್ಞಾನ ಮಂದಿರ ಸಮರ್ಪಣೆ ಕಾರ್ಯಕ್ರಮವು ಎ. 23ರಂದು ನಡೆಯಿತು.
ಬೆಳಗ್ಗೆ ಕೊರಂಗ್ರಪಾಡಿ ವಿದ್ವಾನ್ ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಗ್ಗೆ 10ರ ಮಿಥುನ ಲಗ್ನದಲ್ಲಿ ಶ್ರೀ ವಿಠೊಭ ರುಖುಮಾಯಿ ದೇವರ ಬಿಂಬ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಶ್ರೀ ದೇವರಿಗೆ ಬ್ರಹ್ಮ ಕಲಶಾಭಿಷೇಕ ನಡೆಯಿತು. ಕಾರ್ಕಳ ಯರ್ಲಪಾಡಿ ಬೈಲೂರು ಮಠ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ವಿನಾಯಕಾನಂದ ಮಹಾರಾಜರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ಸಾಧು ಸಾಲ್ಯಾನ್, ಅಧ್ಯಕ್ಷ ಯತಿರಾಜ್ ಎಸ್. ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಶಂಕರ ಸಾಲ್ಯಾನ್, ಗೌರವ ಸಲಹೆಗಾರ ಎಸ್. ಟಿ. ಹರೀಶ್, ಭಜನ ಮಂದಿರದ ಅಧ್ಯಕ್ಷ ಸುಂದರ ಜಿ. ಕುಂದರ್, ಕಾರ್ಯದರ್ಶಿ ಪದ್ಮನಾಭ ಸುವರ್ಣ ಮಾತೃಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಗಣೇಶ್, ತೆಂಕ ತೊಟ್ಟಂ ಮೊಗವೀರ ಸಭಾದ ಅಧ್ಯಕ್ಷ ದಾಮೋದರ ಸಾಲ್ಯಾನ್, ತೆಂಕ ತೊಟ್ಟಂ ಮಹಿಳಾ ಮಂಡಳಿಯ ಅಧ್ಯಕ್ಷೆ ಅಪ್ಪಿ ಸುವರ್ಣ ಪಾಲ್ಗೊಂಡಿದ್ದರು.