ಉಡುಪಿ: ತೋನ್ಸೆ ಖಂಡಿಗೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವವು ಎ.16ರಿಂದ ಎ.23ರ ವರೆಗೆ ಜರಗಲಿದೆ.
ಶ್ರೀ ದೇವಿಗೆ ಲಕ್ಷ್ಮೀ ಮಂಟಪ ಯುಕ್ತ ನವೀಕೃತ ಶಿಲಾಮಯ ಗರ್ಭಗುಡಿ ಮತ್ತು ಅಂಬಲ ಸಮರ್ಪಣೆ, ಪ್ರತಿನಿತ್ಯ ಧಾರ್ಮಿಕ ವಿಧಿವಿಧಾನಗಳು, ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ರಂಗಪೂಜೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ದೇವಿಯ ಹಿನ್ನೆಲೆ
ತೋನ್ಸೆ ಗ್ರಾಮದ ಖಂಡಿಗೆ ವಠಾರದಲ್ಲಿರುವ ಖಂಡಿಗೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾದಲ್ಲಿ ಶ್ರೀ ದೇವಿಯ ಸಾನಿಧ್ಯವು ಒಂದು ಸಹಸ್ರಮಾನದಷ್ಟು ಪ್ರಾಚೀನವಾಗಿದ್ದು ಈಗಿನ ದೇವಸ್ಥಾನ ರಚನೆಯಾಗಿ 231 ವರ್ಷಗಳು ಗತಿಸಿವೆ.
ಅವಿಭಜಿತ ತೋನ್ಸೆ ಗ್ರಾಮದ ದೇವಸ್ಥಾನ ಇದಾಗಿದ್ದು ಈ ಗ್ರಾಮದಲ್ಲಿನ ನೀಡಂಬಳ್ಳಿಯ ಧೂಮಾವತಿ ದೈವಸ್ಥಾನ, ತೋನ್ಸೆ ಗರೋಡಿ, ಕಲ್ಯಾಣಪುರದ ಕೆಂಚಮ್ಮ ದೇವಸ್ಥಾನ, ಗುಡಿ ಅಮ್ಮನ ಕಟ್ಟೆ ಭದ್ರಕಾಳಿ ದೇವಸ್ಥಾ , ಹೂಡೆ ಮತ್ತು ಗುಜ್ಜರಬೆಟ್ಟು ಬೊಬ್ಬರ್ಯ ಕ್ಷೇತ್ರಗಳನ್ನು ತನ್ನ ಪರವಾರ ಶಕ್ತಿ ಸ್ಥಾನಗಳಾಗಿ ಹೊಂದಿದೆ ಎಂದೂ ಹಾಗೂ ಈ ಶಕ್ತಿ ಸ್ಥಾನಗಳಿಂದ ವಾರ್ಷಿಕ ಅನುಸ್ಮರಣೆಗೊಳಬೇಕಾದ ಕ್ಷೇತ್ರ ಎಂಬುದಾಗಿ ಕಂಡುಬಂದಿದೆ. ಅಲ್ಲದೆ ತನ್ನ ಪೂರ್ವ, ದಕ್ಷಿಣ, ವಾಯುವ್ಯ ದಿಕ್ಕಿಗೆ ಪ್ರಭಾವವನ್ನು ಹೊಂದಿರುವಂತಹ ಕ್ಷೇತ್ರವಾಗಿರುತ್ತದೆ ಎಂದು ಕ್ಷೇತ್ರದ ಸಮಿತಿ ತಿಳಿಸಿದೆ.