ಮಲ್ಪೆ : ಮೂಡುತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿಯ ವಾರ್ಷಿಕ ನೇಮ ಫೆ. 21ರಿಂದ 24ರ ವರೆಗೆ ನಡೆಯಲಿದೆ.
ಆ ಪ್ರಯುಕ್ತ ಫೆ. 21ರಂದು ಬೆಳಗ್ಗೆ ಗರೋಡಿಯಲ್ಲಿ ನಾಗ ತನುಸೇವೆ, ಆಶ್ಲೇಷಾ ಬಲಿ, ನಾಗದರ್ಶನ ಸೇವೆ ನಡೆದು, ರಾತ್ರಿ ಬೈದರ್ಕಳ ದರ್ಶನ ಮತ್ತು ಭಂಡಾರವು ನೇಮದ ಚಪ್ಪರಕ್ಕೆ ಹೊರಡಲಿರುವುದು. ಫೆ. 22ರಂದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ಬ್ರಹ್ಮ ಬೈದರ್ಕಳ ನೇಮ, ರಾತ್ರಿ ಬೈದರ್ಕಳ ದರ್ಶನ ಜರಗಲಿದೆ. ಫೆ. 24ರಂದು ರಾತ್ರಿ ಪಂಚಧೂಮಾವತಿ ದೈವದ ಕೋಲವು ನಡೆಯಲಿದೆ ಎಂದು ಬಿಲ್ಲವ ಒಕ್ಕೂಟದ ಅಧ್ಯಕ್ಷ ಬಿ. ಪಿ. ರಮೇಶ್ ಪೂಜಾರಿ ಬಡಾನಿಡಿಯೂರು, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ ಕೋಡಿಮನೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.