Home ಧಾರ್ಮಿಕ ಸುದ್ದಿ ಎ. 13ರಿಂದ ತೊಡಿಕಾನ ಮಲ್ಲಿಕಾರ್ಜುನ ದೇವರ ಜಾತ್ರೆ

ಎ. 13ರಿಂದ ತೊಡಿಕಾನ ಮಲ್ಲಿಕಾರ್ಜುನ ದೇವರ ಜಾತ್ರೆ

1989
0
SHARE

ಬೆಳ್ಳಾರೆ : ಸುಳ್ಯ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೆ ಎ. 13ರಿಂದ 20ರ ತನಕ ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಎ. 1ರಂದು ಜಾತ್ರೆಗೆ ಮುಹೂರ್ತದ ಗೊನೆ ಕಡಿಯಲಾಯಿತು. ಎ. 13ರಂದು ಉಗ್ರಾಣ ತುಂಬಿಸುವುದು, ಹೊರೆ ಕಾಣಿಕೆ, ಮಧ್ಯಾಹ್ನ ಧ್ವಜಾರೋಹಣ ನಡೆಯುವುದು. ಎ. 14ರಂದು ಬೆಳಗ್ಗೆ ವಿಷುಕಣಿ, ಬಳಿಕ ಶತರುದ್ರಾಭಿಷೇಕ, ಎ. 15ರಂದು ರಾತ್ರಿ ಉತ್ಸವ ಬಲಿ ಹೊರಡುವುದು, ಎ. 16ರಂದು ಬೆಳಗ್ಗೆ ಸಣ್ಣ ದರ್ಶನ ಬಲಿ, ರಾತ್ರಿ ನಡುಬೆಳಗು, ಎ. 17ರಂದು ಬೆಳಗ್ಗೆ ಉತ್ಸವ ಬಲಿ, ರಾತ್ರಿ ದೊಡ್ಡಬೆಳಗು ಉತ್ಸವ ನಡೆಯಲಿದೆ.

ಎ. 18ರಂದು ಬೆಳಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಬಲಿ ಹೊರಟು ಒಲಸಿರಿ ಉತ್ಸವ, ಎ. 19ರಂದು ಬೆಳಗ್ಗೆ ಆರಾಟ ಬಾಗಿಲು ತೆರೆಯುವುದು, ಮಧ್ಯಾಹ್ನ ಆರಾಟ ಸಮಾರಾಧನೆ, ರಾತ್ರಿ ಉತ್ಸವ ಬಲಿ, ಎ. 20ರಂದು ಬೆಳಗ್ಗೆ ಅವಭೃಥ ಸ್ನಾನವಾಗಿ ಬಂದು ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಸಂಪ್ರೋಕ್ಷಣೆ ಮಂತ್ರಾಕ್ಷತೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಕಳೆದ ವರ್ಷ ಇಲ್ಲಿ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆದಿದ್ದು, ಈ ಬಾರೀ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here