ಅರಂತೋಡು : ಸುಳ್ಯ ಸೀಮೆಯ ಒಡೆಯ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೆಯ ಧ್ವಜಾರೋಹಣ ನಡೆಯಿತು.
ಬೆಳಗ್ಗೆ ಉಗ್ರಾಣ ತುಂಬಿಸಲಾಯಿತು. ಹೊರೆಕಾಣಿಕೆ ಸಮರ್ಪಿಸಲಾಯಿತು. ಕುಕ್ಕೆ ದೇಗುಲದ ಇಒ ಎನ್.ಎಚ್. ರವೀಂದ್ರ, ದಿನದ ಅನ್ನದಾನ ಸೇವಾಕರ್ತರಾದ ಡಾ| ರೇಣುಪ್ರಸಾದ್ ಕೆ.ವಿ. ಹಾಗೂ ಕುಟುಂಬಸ್ಥರು, ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜರಾಮ್ ಕೀಲಾರು, ಅಧ್ಯಕ್ಷ ಪಿ.ಬಿ. ದಿವಾಕರ ರೈ ಹಾಗೂ ಸದಸ್ಯರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಯು.ಕೆ., ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಕೇಶವಪ್ರಸಾದ್ ಗುಂಡಿಗದ್ದೆ, ಕೆ.ಕೆ. ಬಾಲಕೃಷ್ಣ, ಕೇಶವಮೂರ್ತಿ, ಸತ್ಯಪ್ರಸಾದ್ ಗಬ್ಬಲ್ಕಜೆ, ಮಾಲತಿ ಭೋಜಪ್ಪ, ಬಿ.ಡಿ. ಸರಸ್ವತಿ, ಮಾಜಿ ಸದಸ್ಯರಾದ ಕೆ.ಕೆ. ನಾರಾಯಣ ಕುಂಟುಕಾಡು, ಭವಾನಿಶಂಕರ ಅಡ್ತಲೆ, ನಾರಾಯಣ ಗೌಡ ಕುಯಿಂತೋಡು, ಶ್ರೀ ಮಲ್ಲಿಕಾರ್ಜುನ ಭಜನ ಸಂಘದ
ಅಧ್ಯಕ್ಷ ಜನಾರ್ದನ ಬಾಳೆಕಜೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.