ಅರಂತೋಡು : ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.ಸೋಮವಾರ ರಾತ್ರಿ ರಂಗಪೂಜೆ, ಉತ್ಸವ ಬಲಿ ನಡೆಯಿತು. ಮರು ದಿವಸ ದರ್ಶನ ಬಲಿ ಪ್ರಯಕ್ತ ಸುಳ್ಯ ಸೀಮೆಯ ನೂರಾರು ಭಕ್ತರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಬಲಿಯಲ್ಲಿ ಪಾಲ್ಗೊಂಡು ಬಟ್ಟಲು ಕಾಣಿಕೆ ಹಾಕಿ, ಗಂಧಪ್ರಸಾದ ಸ್ವೀಕರಿಸಿದರು. ಅನಂತರ ತುಲಾಭಾರ ಸೇವೆ ನೆರವೇರಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಮಾಜಿ ಅಧ್ಯಕ್ಷ ಕಿಶೋರ್ಕುಮಾರ್ ಉಳುವಾರು, ಸದಸ್ಯರಾದ ಕೆ.ಕೆ. ನಾರಾಯಣ ಕುಂಟುಕಾಡು, ವಸಂತ್ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಾಲತಿ ಬೋಜಪ್ಪ, ಕೆ.ಕೆ. ಬಾಲಕೃಷ್ಣ, ಕೇಶವ ಪ್ರಸಾದ ಗುಂಡಿಗದ್ದೆ,
ಕೇಶವಮೂರ್ತಿ, ಭಜನ ಸಂಘದ ಅಧ್ಯಕ್ಷ ಜನಾರ್ದನ ಬಾಳಕಜೆ, ಅರಂತೋಡು- ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ದೇವಸ್ಥಾನದ ಮ್ಯಾನೇಜರ್ ಆನಂದ ಕಲ್ಲಗದ್ದೆ ಉಪಸ್ಥಿತರಿದ್ದರು.