ಅರಂತೋಡು : ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ ಗುರುವಾರ ಬೆಳಗ್ಗೆ ಶ್ರೀ ದೇವರ ದೊಡ್ಡ ದರ್ಶನ ಬಲಿ
ನಡೆಯಿತು. ಬೆಳಗ್ಗೆ ದೊಡ್ಡ ದರ್ಶನ ಬಲಿಯ ಅನಂತರ ಬಟ್ಟಲು ಗಂಧಪ್ರಸಾದ ನೆರವೇರಿತು.
ಈ ಸಂದರ್ಭ ದೇಗುಲದ ವ್ಯವಸ್ಥಾಪನ ಸಮಿತಿಯವರು, ಜೀಣೋದ್ದಾರ ಸಮಿತಿಯರು, ಊರವರು ಸುಳ್ಯ ಸೀಮೆ ಹಾಗೂ ಪರವೂರಿನ ನೂರಾರು ಭಕ್ತರು ಭಾಗವಹಿಸಿದ್ದರು.
ಇಂದು ಆರಾಟ ಮಹೋತ್ಸವ ದೇವರ ಆರಾಟ ಮಹೋತ್ಸವ ಎ. 19ರಂದು ನಡೆಯಲಿದೆ. ಬೆಳಗ್ಗೆ ಆರಾಟ ಬಾಗಿಲು ತೆರೆಯುವುದು. ರಾತ್ರಿ ಉತ್ಸವ ಬಲಿ, ಬಳಿಕ ಅವಭೃಥ ಸ್ನಾನವಾಗಿ ಬಂದು ದರ್ಶನ ಬಲಿ ಬಟ್ಟಲು ಕಾಣಿಕೆ ನೆರವೇರಲಿದೆ.