ಕೋಟ: ಕೋಟ ಕಾಶೀ ಮಠದಲ್ಲಿ ಜ.14ರಂದು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ತೃತೀಯ ಪುಣ್ಯತಿಥಿ ಹಾಗೂ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ಜರಗಿತು.
ಈ ಪ್ರಯುಕ್ತ ಬೆಳಗ್ಗೆ ಪಂಚಾಮೃತ- ಪವಮಾನಾಭಿಷೇಕ, ಮಹಾಪೂಜೆ, ಗುರುಪಾದುಕೆ ಉತ್ಸವ, ಪಾದಪೂಜೆ, ಮಹಾಸಮಾರಾಧನೆ ಹಾಗೂ ಸಂಜೆ ನಗರಭಜನೆ, ಪಲ್ಲಕ್ಕಿ ಉತ್ಸವ, ದೇವರಿಗೆ ವಸಂತಪೂಜೆ, ಪಾದಪೂಜೆ- ಗುರು ಗುಣಗಾನ ಜರಗಿತು.
ಈ ಸಂದರ್ಭ ವಿಶೇಷವಾಗಿ ದೀಪ ಪ್ರಜ್ವ್ವಲನೆಯೊಂದಿಗೆ ಬೆಳಗ್ಗೆ 8ರಿಂದ – ರಾತ್ರಿ 8 ಗಂಟೆ ಪರ್ಯಂತ ಅಖಂಡ ಭಜನೆ, ಶಾರದಾ ಪೂಜಾ ಸುವರ್ಣಮಹೋತ್ಸವ ಸಮಿತಿ ವತಿಯಿಂದ ಸಮಾಜದವರಿಂದ ಗುರುಪಾದುಕೆಗೆ ಪುಷ್ಪಾರ್ಚನೆ ನಡೆಯಿತು. ಕೋಟ ಕಾಶೀಮಠ ವ್ಯವಸ್ಥಾಪಕ ಸಮಿತಿ, ವರುಣತೀರ್ಥ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ, ಶ್ರೀ ಶಾರದಾ ಪೂಜಾ ಸುವರ್ಣ ಮಹೋತ್ಸವ ಸಮಿತಿ, ಮಹಿಳಾ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸಮಾಜದವರು ಆರಾಧನಾ ಮಹೋತ್ಸವದಲ್ಲಿ ಉಪಸ್ಥಿತರಿದ್ದರು.