ಕಾಸರಗೋಡು: ತೆರುವತ್ತು ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಪ್ರತಿಷ್ಠಾ ಮಹೋತ್ಸವ ಹಾಗೂ ಮೂರು ವರ್ಷಗಳಿಗೊಮ್ಮೆ ನಡೆಯುವ ನಡಾವಳಿ ಮಹೋತ್ಸವ ಆರಂಭಗೊಂಡಿದ್ದು, ಮಾ.7 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ವಿಷ್ಣು ಪ್ರಕಾಶ ತಂತ್ರಿ ಅವರ ಕಾರ್ಮಿಕತ್ವದಲ್ಲಿ ನಡೆಯಲಿದೆ.
ಫೆ. 26ರಂದು ತಚ್ಚಂಗಾಡು ಲಕ್ಷ್ಮೀಕಾಂತ ಅಗ್ಗಿತ್ತಾಯ ಮತ್ತು ಶಿಷ್ಯರಿಂದ ದೇವರ ನೃತ್ಯ ಬಲಿ ಉತ್ಸವ, ಕೇರಳ ಫೋಕ್ಲಾರ್ ಅಕಾಡೆಮಿಯ ಯುವ ಪ್ರತಿಭಾ ಪುರಸ್ಕಾರ ವಿಜೇತ ಸಿ. ಸಂತೋಷ್ ಗುರುಕ್ಕಳ್ ಅವರ ನೇತೃತ್ವದಲ್ಲಿ ಪಯ್ಯನ್ನೂರು ಶ್ರೀ ಅಷ್ಟಮಚ್ಚಾಲ್ ಕಲಾಸಂಘದವರಿಂದ ‘ಕೋಲ್ಕ್ಕಳಿ ಚರಡುಕುತ್ತಿಕ್ಕಳ್’ ಮತ್ತು ಶ್ರೀ ಚೀರುಂಬಾ ಭಗವತಿ ಮಹಿಳಾ
ಸಮಿತಿಯ ಪ್ರಾಯೋಜಕತ್ವದಲ್ಲಿ ನೃತ್ಯ ವೈವಿಧ್ಯ ಮನೋರಂಜನಾ ಕಾರ್ಯಕ್ರಮ ಜರಗಿತು. ಫೆ. 27ರಂದು ಬೆಳಗ್ಗೆ ನಡಾವಳಿ ಉತ್ಸವಕ್ಕೆ ಗೊನೆ ಕಡಿಯುವ ಕಾರ್ಯಕ್ರಮ ಜರಗಿತು.