ಕಾರ್ಕಳ: ತೆಳ್ಳಾರು ಕಲ್ಲೊಟ್ಟು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮಲಿಂಗೇಶ್ವರ, ಅಬ್ಬಗ-ದಾರಗ, ಆದಿ ಆಲಡೆ ಕ್ಷೇತ್ರದ ಶಿಲಾಮಯ ಗರ್ಭಗೃಹ ನೂತನ ದೇಗುಲ ಸಮರ್ಪಣೆ, ಪ್ರತಿಷ್ಠಾ-ಅಷ್ಟಬಂಧ-ಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ಸಿರಿಜಾತ್ರಾ ವಾರ್ಷಿಕ ಜಾತ್ರಾ ಮಹೋತ್ಸವ ಮೇ 8 ರಿಂದ 17 ರ ತನಕ ಜರಗಲಿದೆ.
ಮೇ 8 ರಂದು ಪೂರ್ವಾಹ್ನ ನವೀಕೃತ ದೇವಾಲಯ ಪರಿಗ್ರಹ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ 3.30 ಕ್ಕೆ ಶೋಭಾಯಾತ್ರೆಯೊಂದಿಗೆ ಹಸಿರುವಾಣಿ ಸಮರ್ಪಣೆಯಾಗಲಿದೆ.
ಮೇ 9 ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಮೇ 10 ರಂದು ಪೂರ್ವಾಹ್ನ ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠಾ ಕಲಶಾಭಿಷೇಕ, ಬ್ರಹ್ಮಲಿಂಗೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ.
ಮೇ 11 ರ ಸಂಜೆ 6 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ನಂತರ ವೀರ ಅಭಿಮನ್ಯ ಯಕ್ಷಗಾನ(ಬಡಗು) ಜರಗಲಿದೆ. ಮೇ 12 ರಂದು ಧಾರ್ಮಿಕ ಸಭೆ ನಡೆಯಲಿದ್ದು, ಬಳಿಕ ಕುದ್ರೋಳಿ ಗಣೇಶ್ ಅವರಿಂದ ಮ್ಯಾಜಿಕ್ ಕಾರ್ಯಕ್ರಮ ನಡೆಯಲಿದೆ. ಮೇ 13 ರಂದು ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಸಂಜೆ 7.30 ಕ್ಕೆ ಧಾರ್ಮಿಕ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಮೇ.14, 15ರಂದು ಧಾರ್ಮಿಕ ಸಭೆಗಳು ನಡೆಯಲಿವೆ. ಅದೇ ದಿನ ಚಾ ಪರ್ಕ ಕಲಾವಿದರಿಂದ ಪನಿಯರೆ ಅವಂದಿನ ನಾಟಕ ಪ್ರದರ್ಶನಗೊಳ್ಳಲಿದೆ.
ಮೇ 16 ರಂದು ಆಲಡೆ ಕ್ಷೇತ್ರದಲ್ಲಿ ಬ್ರಹ್ಮದೇವರ ದರ್ಶನ ಸೇವೆ ಸಹಿತ ಇತರ ಧಾಮಿಕ ಕಾರ್ಯಕ್ರಮಗಳು ಜರಗಲಿವೆ. ಮೇ 17 ರಂದು ಪಂಚವಿಂಶತಿ ಕಲಶ ಪ್ರಧಾನ ಹೋಮ, ಅಭಿಷೇಕ , ಮಹಾ ಸಂಪ್ರೋಕ್ಷಣೆ ಜರಗಲಿದೆ.