ತೆಕ್ಕಟ್ಟೆ: ಗಾಯತ್ರಿ ಮಂತ್ರವು ಋಗ್ವೇದದಲ್ಲಿಯೇ ಅತ್ಯಂತ ಪರಮ ಶ್ರೇಷ್ಠ ಮಂತ್ರವಾಗಿ ರೂಪುಗೊಂಡಿದೆ ಎಂದು ನಿವೃತ್ತ ಪದವೀಧರ ಶಿಕ್ಷಕ ವೇ| ಮೂ| ತೆಕ್ಕಟ್ಟೆ ಶ್ರೀನಿವಾಸ ಅಡಿಗ ಅವರು ಹೇಳಿದರು.
ಆ.10 ರಂದು ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಕುಂದಾಪುರ ತಾಲೂಕಿನ ಕುಂಭಾಸಿ ವಲಯದ ವಿಪ್ರ ಸಂಘಟನೆಗಳು ಒಗ್ಗೂಡಿ ಲೋಕ ಕಲ್ಯಾಣಾರ್ಥವಾಗಿ ಡಿ.27ರಿಂದ ಕುಂದಾಪುರದ ಕಾಳಾವರದಲ್ಲಿ ನಡೆಯುವ ಕರ್ನಾಟಕ ರಾಜ್ಯ ಬ್ರಾಹ್ಮಣ ಸಮ್ಮೇಳನದಲ್ಲಿ ಗಾಯತ್ರಿ ಜಪಾನುಷ್ಠಾನ ತದಂಗ ಗಾಯತ್ರಿಯಾಗ ಹಾಗೂ ಶ್ರೀ ಗಾಯತ್ರಿ ಮಂತ್ರ ಅನುಷ್ಠಾನ ಹೋಮದ ಪ್ರಯುಕ್ತ ಪೂರ್ವಭಾವಿಯಾಗಿ ನಡೆದ ಗಾಯತ್ರಿ ಜಪಾನುಷ್ಠಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಾವು ಧರ್ಮವನ್ನು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತವೆ. ಧರ್ಮವು ವೇದ ಧರ್ಮವಾಗಬೇಕು. ಸಕಲ ಶಾಸ್ತ್ರಗಳು ಮಾನವನ ಉದಾತ್ತ ಧ್ಯೇಯವನ್ನು ತಿಳಿಸುವ ಮಹಾಮಂತ್ರವಾಗಿ ರೂಪುಗೊಂಡಿವೆೆ ಎಂದು ಅವರು ತಿಳಿಸಿದರು.
ದ್ರಾವಿಡ ಬ್ರಾಹ್ಮಣ ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಗಣೇಶ್ ರಾವ್ ಕುಂಭಾಸಿ ಅವರಿಗೆ ಶ್ರೀ ಗಾಯತ್ರಿ ಮಂತ್ರದ ಅಂಕಿ ಅಂಶ ಕೋಷ್ಟಕ ಜಪಾನುಷ್ಠಾನದಲ್ಲಿ ಪಾಲ್ಗೊಂಡ ವಿಪ್ರ ಸದಸ್ಯರಿಗೆ ಹಸ್ತಾಂತರಿಸಿದರು.
ಸುಮಾರು 50 ಮಂದಿ ಬ್ರಾಹ್ಮಣರು ಪಠಣದಲ್ಲಿ ಪಾಲ್ಗೊಂಡಿದ್ದರು. ಬೆಟ್ಟಿನಮನೆ ವಾದಿರಾಜ ಹತ್ವಾರ್, ಜಗದೀಶ್ ಕುಂಭಾಸಿ, ದೇಗುಲದ ಅರ್ಚಕ ಜನಾರ್ದನ ಐತಾಳ್, ಗಣಪಯ್ಯ ಚಡಗ, ರಾಘವೇಂದ್ರ ಪುರಾಣಿಕ್ ಉಪಸ್ಥಿತರಿದ್ದರು.