ತೆಕ್ಕಟ್ಟೆ: ಭಾರತೀಯ ಧರ್ಮ ಸಂಸ್ಕೃತಿಗಳಿಗೆ ಅದರದೆಯಾದ ಇತಿಹಾಸಗಳಿವೆ, ಅದರಂತೆ ಈ ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು ಬದುಕನ್ನೇ ಸುಂದರಗೊಳಿಸಿವೆ. ನಮ್ಮ ಹಿರಿಯರು ಕೆಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿದ್ದ ಜನತೆ ಸೋಮವಾರದಂದು ಶ್ರೀಕ್ಷೇತ್ರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮುಂಜಾನೆಯಿಂದಲೇ ಸಹಸ್ರಾರು ಮಂದಿ ಭಕ್ತರ ದಂಡು ಶ್ರೀದೇವರ ಸನ್ನಿಧಿಗೆ ಆಗಮಿಸಿ ದರ್ಶನ ಪಡೆದರು
ವಿಶೇಷ ವಾಹನ ಪೂಜೆಗಾಗಿ ಕಿಕ್ಕಿರಿದು ಸೇರಿದ ಜನ: ದೀಪಾವಳಿ ಹಬ್ಬದಂದು ಖರೀದಿಸಿದ ಹೊಸ ವಾಹನಗಳು ಹಾಗೂ ಇನ್ನಿತರ ವಾಹನಗಳ ಪೂಜೆಗಾಗಿ ಮುಂಜಾನೆಯಿಂದಲೇ ಅಲಂಕೃತಗೊಂಡ ವಾಹನಗಳನ್ನು ದೇಗುಲಕ್ಕೆ ತಂದು ವಿಶೇಷವಾಗಿ ಪೂಜಿಸುತ್ತಿರುವ ದೃಶ್ಯ ಕಂಡು ಬಂತು. ಹಾಗೂ ದೇಗುಲದಲ್ಲಿ ನಡೆಯುವ ಅನ್ನ ಪ್ರಸಾದವನ್ನು ಸಹಸ್ರಾರು ಮಂದಿ ಭಕ್ತರು ಸ್ವೀಕರಿಸಿದರು.