ಉಡುಪಿ : ತೀರ್ಥಹಳ್ಳಿ ರಥಬೀದಿಯಲ್ಲಿರುವ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇಗುಲದ ಶ್ರೀ ದೇವರ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರಿಂದ ಸಹಸ್ರ ಕುಂಭಾಭಿಷೇಕ ಸಂಪನ್ನಗೊಂಡಿತು.
ಪ್ರಾತಃಕಾಲ ಶ್ರೀ ದೇವರಿಗೆ ಪಂಚಾಮೃತಾಭಿಷೇಕದ ಅನಂತರ ಮಂಡಲದಲ್ಲಿ ತಂತ್ರಸಾರೋಕ್ತ ರೀತ್ಯಾ ಪೂಜಿಸಲ್ಪಟ್ಟ ರಜತ ಹಾಗೂ ತಾಮ್ರದ ಸಹಸ್ರ ಕಲಶಗಳಿಂದ ಶ್ರೀಗಳು ಅಭಿಷೇಕ ನೆರವೇರಿಸಿದರು. ಯಜ್ಞ ಮಂಟಪದಲ್ಲಿ ಮಹಾ ಪೂರ್ಣಾಹುತಿ, ಮಹಾಪೂಜೆ ನಡೆಯಿತು.
ಆಡಳಿತ ಮಂಡಳಿ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ ನಾಯಕ್, ರಮೇಶ್ ನಾಯಕ್, ನಂದಕಿಶೋರ್ ಕಾಮತ್, ನಾಗರಾಜ್ ಪ್ರಭು, ಡಾ| ಎಂ. ಜಗನ್ನಾಥ್ ಶೆಣೈ ಮೈಸೂರು, ರಘುವೀರ್ ಭಂಡಾರ್ಕರ್, ಜಗನ್ನಾಥ್ ಕಾಮತ್ ಮಂಗಳೂರು ಉಪಸ್ಥಿತರಿದ್ದರು.