Home ನಂಬಿಕೆ ಸುತ್ತಮುತ್ತ ಕೆಲವೇ ವರ್ಷದಲ್ಲಿ ಜಗತ್ತು ನಾಶವಾಗುತ್ತಾ?ಇದಕ್ಕೆ ಉತ್ತರ ಹಿಂದೂ ಧರ್ಮದಲ್ಲಿದೆ…

ಕೆಲವೇ ವರ್ಷದಲ್ಲಿ ಜಗತ್ತು ನಾಶವಾಗುತ್ತಾ?ಇದಕ್ಕೆ ಉತ್ತರ ಹಿಂದೂ ಧರ್ಮದಲ್ಲಿದೆ…

19281
0
SHARE

ಇತ್ತೀಚೆಗೆ ಹಬ್ಬುತ್ತಿರುವ ನಂಬಿಕೆಯೊಂದು ಕೆಲವೇ ವರ್ಷಗಳಲ್ಲಿ ಜಗತ್ತು ನಾಶವಾಗುತ್ತದೆ ಎನ್ನುತ್ತದೆ. ಅದಕ್ಕೆ ಮೂಲವಾಗಿ ಹಳೆಯ ನಾಗರೀಕತೆಯೊಂದರ ಕಾಲಗಣನಾ ಪಂಚಾಂಗಒಂದನ್ನೂ ಪರಿಗಣಿಸುತ್ತಾರೆ. ಇಂಥ ವದಂತಿಗಳು ಹಲವಾರು ಬಾರಿ ಈ ಹಿಂದೆಯೂ ಪ್ರಚಾರದಲ್ಲಿತ್ತು. ಯಾವುದೋ ಕೆಲವು ಹಿತಾಸಕ್ತಿಗಳಿಗೋಸ್ಕರ ಇಂಥಾ ಪ್ರಚಾರಗಳು ಉಂಟಾಗುತ್ತವೆ. ಭಾರತೀಯ ಪರಂಪರೆಯಾಗಲೀ ಕಾಲಗಣನೆಯಾಗಲಿ ಇದನ್ನು ಒಪ್ಪುವುದಿಲ್ಲ. ಇದಕ್ಕೆ ಹಿಂದೂ ಕಾಲಗಣನೆಯ ಕ್ರಮವನ್ನು ತಿಳಿದುಕೊಳ್ಳುವುದು ಅವಶ್ಯ.

ಶಾಸ್ತ್ರಗಳು ಕಾಲಗಣನೆಯನ್ನು ಅತ್ಯಂತ ಸೂಕ್ಷ್ಮವಾಗಿ ವಿಸ್ತಾರವಾಗಿ ಹೇಳಿವೆ. ಹದಿನೆಂಟು ಬಾರಿ ಸ್ವಾಭಾವಿಕವಾಗಿ ಕಣ್ಣು ರೆಪ್ಪೆ ಮುಚ್ಚಿತೆಗೆಯುವ ಸಮಯಕ್ಕೆ ಕಾಷ್ಠಾ ಎನ್ನುತ್ತಾರೆ. ಮೂವತ್ತು ಕಾಷ್ಠಾಗಳು ಒಂದು ಕಾಲ. ಮೂವತ್ತು ಕಾಲಗಳು ಒಂದು ಮುಹೂರ್ತ ಮತ್ತು ಮೂವತ್ತು ಮುಹೂರ್ತಗಳು ಒಂದು ದಿನ ಎಂದು ಹೇಳಲ್ಪಟ್ಟಿದೆ. ಮನುಷ್ಯರ ಒಂದುಮಾಸ ಪಿತೃಗಳಿಗೆ ಒಂದು ದಿನ. ತಿಂಗಳಲ್ಲಿ ಎರಡು ಪಕ್ಷ ಕೃಷ್ಣಪಕ್ಷ ಮತ್ತು ಶುಕ್ಲಪಕ್ಷ . ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ ಕೃಷ್ಣಪಕ್ಷ ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಶುಕ್ಲಪಕ್ಷ.

ಕೃಷ್ಣಪಕ್ಷದಲ್ಲಿ ಪಿತೃಗಳು ಕ್ರಿಯಾಶೀಲರಾಗಿರುತ್ತಾರೆ. ಶುಕ್ಲಪಕ್ಷದಲ್ಲಿ ಅವರು ನಿದ್ರಿಸುತ್ತಾರೆ. ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ. ವರ್ಷದಲ್ಲಿ ಎರಡು ವಿಭಾಗ ಉತ್ತರಾಯಣ ಮತ್ತು ದಕ್ಷಿಣಾಯನ. ಉತ್ತರಾಯಣ ದೇವತೆಗಳಿಗೆ ಹಗಲು. ದಕ್ಷಿಣಾಯಣ ದೇವತೆಗಳಿಗೆ ರಾತ್ರಿ. ಆದ್ದರಿಂದ ಉತ್ತರಾಯಣವನ್ನು ಪುಣ್ಯಕಾಲ ಎನ್ನುತ್ತಾರೆ.

ನಾಲ್ಕುಸಾವಿರ ದೇವವರ್ಷ ಕೃತಯುಗ, ಮೂರುಸಾವಿರ ದೇವವರ್ಷ ತ್ರೇತಾಯುಗ. ಎರಡು ಸಾವಿರ ದೇವವರ್ಷ ದ್ವಾಪರಯುಗ ಹಾಗೂ ಒಂದುಸಾವಿರ ದೇವವರ್ಷಗಳು ಕಲಿಯುಗ.

ಒಟ್ಟು ಹತ್ತು ಸಾವಿರ ದೇವ ವರ್ಷಗಳು ಮತ್ತು ಎರಡು ಸಾವಿರ ದೇವವರ್ಷಗಳ ಸಂಧ್ಯಾಕಾಲ ಸೇರಿ ಹನ್ನೆರಡು ಸಾವಿರ ದೇವವರ್ಷಗಳು ದೇವತೆಗಳ ಒಂದು ಯುಗ [42,20,000 ವರ್ಷಗಳು] ಅಂಥಾ ಸಹಸ್ರ ದೇವಯುಗ ಸೇರಿ ಬ್ರಹ್ಮನಿಗೆ ಒಂದು ರಾತ್ರಿ ಅಷ್ಟೇ ಕಾಲ ಹಗಲು. ಇದರ ಜ್ಞಾನವುಳ್ಳವರನ್ನು ಕಾಲಜ್ಞಾನಿಗಳು ಎನ್ನುತ್ತಾರೆ. ಹನ್ನೆರಡು ಸಾವಿರ ದೇವವರ್ಷಗಳ ಎಪ್ಪತ್ತೊಂದು ಯುಗಗಳಿಗೆ ಒಂದು ಮನ್ವಂತರ ಎಂದು ಹೇಳುತ್ತಾರೆ. ನಾವು ಸೃಷ್ಟಿಯನ್ನು ಅನಂತ ಅನಾದಿ ಎನ್ನುತ್ತೇವೆ. ಸಮಯ ಮತ್ತು ಅವಕಾಶಗಳಿಗೆ ಮಿತಿಯೇ ಇಲ್ಲ ಎನ್ನುವುದು ನಮ್ಮ ನಂಬಿಕೆ ಮಹಾಕಾಲನೆಂದು ದೇವರನ್ನು ಕರೆಯುತ್ತೇವೆ.

ಈ ಮಹಾಕಾಲಗಣನೆಯಲ್ಲಿ ಬರುವ ಇಂದಿನ ಕಾಲಘಟ್ಟ ಕಲಿಯುಗದ ಇದು ಸಾವಿರದನೂರಾಹತ್ತು ವರ್ಷಗಳಾಗಿವೆ. ಮಹಾಪ್ರಳಯ ಹತ್ತಿರದಲ್ಲಿ ಅಂತೂ ಇಲ್ಲ “ಮನುಷ್ಯ ತನ್ನ ಭಸ್ಮಾಸುರ ಹಸ್ತವನ್ನು ತನ್ನ ತಲೆಗೆ ಇಟ್ಟುಕೊಳ್ಳದಿದ್ದರೆ…”
(ಪುಸ್ತಕದಿಂದ ಆಯ್ದ ಭಾಗ)

LEAVE A REPLY

Please enter your comment!
Please enter your name here