Home ಧಾರ್ಮಿಕ ಸುದ್ದಿ ಪದವು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ: ಸಮಾಲೋಚನ ಸಭೆ

ಪದವು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ: ಸಮಾಲೋಚನ ಸಭೆ

667
0
SHARE

ಸತಾರ್ಯಕ್ಕೆ ದೇವರ ಅನುಗಹ: ಶ್ರೀಪಾದ ಪಾಂಗಣ್ಣಾಯ

ಪುಂಜಾಲಕಟ್ಟೆ ಸೆ. 22: ವಾಮದ ಪದವು ಸಮೀಪದ ಅಜ್ಜಿಬೆಟ್ಟು ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 2 ಕೋ. ರೂ ವೆಚ್ಚದಲ್ಲಿ ಪುನಃ ನಿರ್ಮಾಣಗೊಳ್ಳುತ್ತಿದ್ದು, ಶ್ರೀಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳ ಸಮಾಲೋಚನ ಸಭೆ ಜರಗಿತು.

ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಮಾತನಾಡಿ, ಜೀರ್ಣೋ ದ್ಧಾರ ಕಾರ್ಯದಂತಹ ಸತ್ಕಾರ್ಯಕ್ಕೆ ದೇವರ ಅನುಗ್ರಹದೊಂದಿಗೆ ಜನ ಬೆಂಬಲ ದೊರಕುವುದು. ದೇವಸ್ಥಾನದ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ತೊಡಗಿಸಿಕೊಂಡಾಗ ಕಾರ್ಯ ಸಫಲತೆ ಯಾಗುವುದು ಎಂದು ಹೇಳಿದರು.

ಪೂರ್ವಜರ ಜೀವನ ಪದ್ಧತಿ ಯಂತೆ ಗ್ರಾಮದ ದೈವ – ದೇವರ
ಶ್ರೀಪಾದ ಪಾಂಗಣ್ಣಾಯ ಅವರು ಮಾತನಾಡಿದರು. ಅಭಿವೃದ್ಧಿ ಯಿಂದ ಗ್ರಾಮಾಭಿವೃದ್ಧಿಗೊಂಡು ಸುಂದರ ಬದುಕು ನಿರ್ಮಾಣಗೊಳ್ಳುವುದು. ದೇವಸ್ಥಾನಗಳಲ್ಲಿ ಧರ್ಮ ಜಾಗೃತಿ ಮೂಲಕ ಜನರು ಒಗ್ಗಟ್ಟಾಗಿ ನಿಷ್ಕಲ್ಮಶ ಮನಸ್ಸಿನಿಂದ ಆರಾಧಿಸಿ ಬ್ರಹ್ಮಕಲ ಶಾಧಿ ಸಾನ್ನಿಧ್ಯ ಪ್ರತಿಷ್ಠಾಪನೆಯಲ್ಲಿ ವಿಶೇಷ ಶಕ್ತಿ ಸಂಚಯವಾಗುತ್ತದೆ. ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯಾಪ್ತಿಯ ಏಳು ಗ್ರಾಮಗಳ ಗ್ರಾಮ ಸಮಿತಿಗಳ ಮೂಲಕ ಪ್ರತೀ ಮನೆಗೆ ವಿಜ್ಞಾಪನ ಪತ್ರ ವಿತರಣೆ, ನಿಧಿ ಸಂಗ್ರಹ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ನವರಾತ್ರಿ ಬಳಿಕ ಪ್ರಶ್ನೆ ಚಿಂತನೆ ಪ್ರಕಾರ ಗರ್ಭಗುಡಿ ತೆರವುಗೊಳಿಸಿ ಬಾಲಾಲಯ ಪ್ರತಿಷ್ಠೆ ನಡೆಸಲು ನಿರ್ಣಯಿಸಲಾಯಿತು.

ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಮಹಿಮ ಭಟ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಾಬು ಪೂಜಾರಿ ಕೌಡಾಡಿಗುತ್ತು, ಟಿ. ರಘುನಾಥ ಪೈ ಮಾವಿನಕಟ್ಟೆ, ಬೋಜರಾಜ ಶೆಟ್ಟಿ ಕೊರಗಟ್ಟೆ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಬೆಂಗಳೂರು ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ, ವಿವಿಧ ಗ್ರಾಮ ಸಮಿತಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸಮಿತಿ ಪ್ರ. ಕಾರ್ಯದರ್ಶಿ ಯೋಗೀಶ್‌ ಕಲಸಡ್ಕ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿ ಹರಿಪ್ರಸಾದ್‌ ನಿರೂಪಿಸಿದರು

LEAVE A REPLY

Please enter your comment!
Please enter your name here