Home ಧಾರ್ಮಿಕ ಸುದ್ದಿ ದೇವಸ್ಥಾನ ಸಂಸ್ಕಾರ ಕಲಿಸುವ ಕೇಂದ್ರವಾಗಲಿ: ಮುಕ್ತಾನಂದ ಸ್ವಾಮೀಜಿ

ದೇವಸ್ಥಾನ ಸಂಸ್ಕಾರ ಕಲಿಸುವ ಕೇಂದ್ರವಾಗಲಿ: ಮುಕ್ತಾನಂದ ಸ್ವಾಮೀಜಿ

1490
0
SHARE

ಅಜೆಕಾರು: ಹಿಂದೂ ಸಮ್ಮಾನ ಧರ್ಮದ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಇದನ್ನು ಸಮರ್ಥವಾಗಿ ಎದುರಿಸಬೇಕಾದರೆ ನಮ್ಮ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳು ಸಂಸ್ಕಾರ ಕಲಿಸುವ ಕೇಂದ್ರವಾಗಿ ಬೆಳೆಯಬೇಕಾಗಿದೆ ಎಂದು ಕರಿಂಜೆ ಮಠದ ಶ್ರೀ ಮುಕ್ತಾನಂದ
ಸ್ವಾಮೀಜಿ ಹೇಳಿದರು.

ಅವರು ಎಳ್ಳಾರೆ ಪಾಲ್‌ಬೆಟ್ಟುವಿನಲ್ಲಿ ಗ್ರಾ.ಪಂ. ಕಡ್ತಲ ಹಾಗೂ ಜೀರ್ಣೋದ್ಧಾರ ಸಮಿತಿ ಗದ್ದುಗೆ ಮಾರಿಯಮ್ಮ ದೇವಸ್ಥಾನ ಇದರ ಜಂಟಿ ಸಹಯೋಗದಲ್ಲಿ ಜ.21ರಂದು ನಡೆದ ಗದ್ದುಗೆ ಮಾರಿಯಮ್ಮ ದೇವಸ್ಥಾನದ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಶಾಸಕ ವಿ. ಸುನಿಲ್‌ ಕುಮಾರ್‌ ಶಿಲಾನ್ಯಾಸ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ದಿನೇಶ್‌ ಪೈ, ಜಿಲ್ಲಾ ಪಂಚಾಯತ್‌ ಸದಸ್ಯೆ ಜ್ಯೋತಿ ಹರೀಶ್‌ ಪಾಲ್ಗೊಂಡಿದ್ದರು. ಕಡ್ತಲ ಗ್ರಾ.ಪಂ. ಅಧ್ಯಕ್ಷ ಅರುಣ್‌ ಕುಮಾರ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಪಂಚಾಯತ್‌ ಸದಸ್ಯೆ ಸುಲತಾ ರಾಮಕೃಷ್ಣ ನಾಯ್ಕ, ಮುನಿಯಾಲು ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಪೈ, ಅಜೆಕಾರು ವ್ಯ.ಸೇ. ಸ. ಸಂಘದ ಅಧ್ಯಕ್ಷ ಭವಾನಿ ಶಂಕರ್‌, ಕಡ್ತಲ ಗ್ರಾ.ಪಂ. ಉಪಾಧ್ಯಕ್ಷೆ ಮಾಲತಿ ಕುಲಾಲ್‌, ಮಾಜಿ ತಾ.ಪಂ. ಸದಸ್ಯೆ ಪ್ರಮೀಳಾ ಹರೀಶ್‌, ಗ್ರಾ.ಪಂ. ಸದಸ್ಯರಾದ ಸಂಧ್ಯಾ, ಸುಕೇಶ್‌ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್‌, ಅರ್ಚಕ ಪ್ರಶಾಂತ್‌ ನಾಯ್ಕ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಸತೀಶ್‌ ಪೂಜಾರಿ ಎಳ್ಳಾರೆ ಪ್ರಾಸ್ತಾವಿಸಿ, ನಿವೃತ್ತ ಶಿಕ್ಷಕ ಕೇಶವ ನಾಯಕ್‌ ಸ್ವಾಗತಿಸಿ, ಶಿಕ್ಷಕ ಪ್ರಕಾಶ್‌ ಪೂಜಾರಿ ನಿರೂಪಿಸಿದರು. ರಾಮಚಂದ್ರ ನಾಯಕ್‌ ವಂದಿಸಿದರು.

ಸಮ್ಮಾನ
ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ರೂ. 4.50 ಲಕ್ಷ ಅನುದಾನ ಒದಗಿಸಿಕೊಟ್ಟ ಶಾಸಕ ಸುನಿಲ್‌ ಕುಮಾರ್‌ರವರನ್ನು ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜಾಗ ಕೊಡುಗೆಯಾಗಿ ನೀಡಿದ ಸ್ಥಳೀಯರಾದ ಕಲಾವತಿ ಶೆಣೈ, ವಾಸು ಆಚಾರ್ಯ, ಕೃಷ್ಣ ಆಚಾರ್ಯ, ಅಣ್ಣಯ್ಯ ನಾಯಕ್‌, ಜನಾರ್ದನ ನಾಯಕ್‌, ಕೃಷ್ಣ ನಾಯಕ್‌ರವರನ್ನು ಸಮ್ಮಾನಿಸಲಾಯಿತು.

LEAVE A REPLY

Please enter your comment!
Please enter your name here