ಸುರತ್ಕಲ್ : ಶ್ರೀ ವೀರ ಹನುಮಾನ್ ಮಂದಿರ ಹೊಸಬೆಟ್ಟು ಇಲ್ಲಿನ 16ನೇ ವರ್ಷದ ಪೂಜಾ ಮಹೋತ್ಸವ ಇತ್ತೀಚೆಗೆ ಜರಗಿತು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಜೋತಿಷಿ ನಾಗೇಂದ್ರ ಭಾರದ್ವಾಜ್ ಅವರ ಉಪಸ್ಥಿತಿಯಲ್ಲಿ ವಿಶೇಷ ಕಲಶಾಭಿಷೇಕ, ಪೂಜೆ ನೆರವೇರಿತು. ಉದ್ಯಮಿ ಶ್ರೀನಿವಾಸ ಭಟ್ ಅವರು ಉದ್ಘಾಟಿಸಿದರು.
ಆಶೀರ್ವಚನ ನೀಡಿದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಹನುಮಂತನ ನಾಮಸ್ಮರಣೆಯಿಂದ ಮಾತ್ರವೇ ಸಕಲ ಪಾಪಗಳು ಪರಿಹಾರ ವಾಗುತ್ತವೆ. ಮೊಗವೀರ ಸಮುದಾಯ ಅತೀ ಹೆಚ್ಚು ದೈವ ದೇವಸ್ಥಾನ, ಭಜನ ಮಂದಿರವನ್ನು ನಿರ್ಮಿಸಿ ಸದಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿರತ ವಾಗುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗಿದ್ದಾರೆ. ಉದ್ಯೋಗ ನಿಮಿತ್ತ ಸಮುದ್ರಕ್ಕೆ ತೆರಳುವ ಸಂದರ್ಭ ದೇವರ ಆಶೀರ್ವಾದವೂ ಪ್ರಾಪ್ತಿಯಾಗಿ ಯಾವುದೇ ಅವಘಡ ಸಂಭವಿಸದೆ ಮೀನುಗಾರರ ಸಮುದಾಯವು ಸುಖ ಶಾಂತಿಯಿಂದ ಇರಲು ದೈವ, ದೇವರ ಅನುಗ್ರಹವೂ ಕಾರಣ ಎಂದರು.
ನಾಗೇಂದ್ರ ಭಾರದ್ವಾಜ್ ಶುಭ ಹಾರೈಸಿದರು. ವೀರಾಂಜನೇಯ ಭಜನ ಮಂದಿರದ ಅಧ್ಯಕ್ಷ ಶರತ್ ಎಲ್. ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿ, ಮಂದಿರದಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮಗಳು, ಅನ್ನಸಂತರ್ಪಣೆ ನಡೆಯುತ್ತಾ ಬರುತ್ತಿದೆ ಎಂದರು. ಆಡಿಟರ್ ಮನೋಜ್ ಕುಮಾರ್ ಹೊಸಬೆಟ್ಟು, ಹೊಸಬೆಟ್ಟು ಮೊಗವೀರ ಸಂಘದ ಅಧ್ಯಕ್ಷ ಗಂಗಾಧರ ಎಚ್., ಮಂದಿರದ ಅಧ್ಯಕ್ಷ ಶರತ್ ಎಲ್. ಕರ್ಕೇರ, ಉಪಾಧ್ಯಕ್ಷ ಕುಮಾರ್ ಕರ್ಕೇರ ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್, ಕೋಶಾ ಧಿಕಾರಿ ಮೋಹನ್ ದಾಸ್ ಸುವರ್ಣ, ಪ್ರಧಾನ ಅರ್ಚಕ ತಿಲಕ್ ಸಾಲ್ಯಾನ್, ಸಮಿತಿ ಸದಸ್ಯರಾದ ಧನಂಜಯ ಸಾಲ್ಯಾನ್ ಸಚಿನ್, ಮೋಹನ್ಚಂದ್ರ, ಅಶೋಕ್ ಕಾಂಚನ್, ಹರಿಶ್ಚಂದ್ರ ಕೋಟ್ಯಾನ್, ಕಿಶೋರ್, ಹರೀಶ್, ಸಂದೀಪ್, ಮಹೇಶ್ ಸುವರ್ಣ, ಶ್ರವಣ್, ಗುರಿಕಾರರು, ಪೂಜಾರಿಯವರು, ಅರ್ಚಕ ವೃಂದದವರು ಉಪಸ್ಥಿತರಿದ್ದರು.