Home ನಂಬಿಕೆ ಸುತ್ತಮುತ್ತ ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ ಇಪ್ಪತ್ತನಾಲ್ಕು ಗುರುಗಳಲ್ಲಿ ಆರನೆಯ ಗುರು:ಚಂದ್ರ

ಜ್ಞಾನಾರ್ಜನೆಗೆ ಆಶ್ರಯಿಸಬೇಕಾದ ಇಪ್ಪತ್ತನಾಲ್ಕು ಗುರುಗಳಲ್ಲಿ ಆರನೆಯ ಗುರು:ಚಂದ್ರ

1263
0
SHARE

ಅರಿವನ್ನು ನೀಡುವವನು ಗುರುವಾಗುತ್ತಾನೆ. ಯಾವುದೇ ಜ್ಞಾನವು ಉದಾಹರಣೆಗಳ ಮೂಲಕ ದೊರೆಯಲ್ಪಟ್ಟಾಗ ಅದರ ಪರಿಣಾಮ ಹೆಚ್ಚು. ಅಂತಹ ಉದಾಹರಣೆಗಳೂ ಗುರುಸ್ವರೂಪವೇ. ಮದ್ಭಾಗವತದಲ್ಲಿ ಚಂದ್ರನನ್ನು ದೃಷ್ಟಾಂತವಾಗಿಟ್ಟುಕೊಂಡು ಉತ್ಪತ್ತಿ ಮತ್ತು ಮೃತ್ಯುವಿನ ಬಗ್ಗೆ ಹೇಳಲಾಗಿದೆ. ಕಾಲದ ವೇಗದ ಪ್ರಭಾವದಿಂದಾಗಿ ಚಂದ್ರನಲ್ಲಿ ಕಲೆಗಳು ವೃದ್ಧಿ-ಕ್ಷಯವಾಗುತ್ತ ಇರುತ್ತವೆ. ಇದೇ ರೀತಿ ದೇಹವು ಉತ್ಪತ್ತಿಯಿಂದ ಹಿಡಿದು ಮೃತ್ಯುವಿನವರೆಗೆ ಆಗುವ ಅವಸ್ಥೆಗಳು ಗಮನಕ್ಕೆ ಬಾರದಿರುವ ಕಾಲದ ಪ್ರಭಾವದಿಂದಾಗಿ ಬದಲಾಗುತ್ತ ಇರುತ್ತವೆ. ಕಾಲದ ಪ್ರಚಂಡವೇಗದಿಂದ ಎಲ್ಲ ಪ್ರಾಣಿಗಳ ಉತ್ಪತ್ತಿ ಮತ್ತು ಮೃತ್ಯು ಸದಾಕಾಲ ಆಗುತ್ತಲೇ ಇರುತ್ತದೆ. ಆದರೆ ಅದು ಕಾಣುವುದಿಲ್ಲ. ಅವಸ್ಥೆಯ ಬದಲಾವಣೆಗೆ ಕಾರಣ ಕಾಲ ಮತ್ತು ಕಾಲದವೇಗ. ಆದರೆ ಇದು ಕಣ್ಣಿಗೆ ಕಾಣಿಸುವುದಿಲ್ಲ. ಹೇಗೆ ಅಗ್ನಿಯ ಜ್ವಾಲೆಗಳು ಅಗ್ನಿಯಿಂದ ಹೊರಟು ಕಣ್ಮರೆಯಾಗುವುದು ಕಾಣುವುದಿಲ್ಲವೋ ಹಾಗೆಯೇ ಈ ಬದಲಾವಣೆಗೆ ಕಾರಣಗಳನ್ನು ಕಾಣಲಾಗದು. ಆದರೆ ಈ ಬದಲಾವಣೆಗಳು ಉಂಟಾಗುತ್ತವೆ. ಮತ್ತು ಹುಟ್ಟು-ಸಾವುಗಳಿಗೂ ಕಾಲದ ಚಲನೆಯೇ ಕಾರಣ ಎಂಬ ಸೂಕ್ಷ್ಮವನ್ನೂ ಆತ್ಮವು ಇವುಗಳಿಂದ ಮುಕ್ತವಾದುದೆಂಬುದನ್ನೂ ಚಂದ್ರನನ್ನು ನೋಡಿ ಅರ್ಥಮಾಡಿಕೊಳ್ಳಬೇಕೆಂದು ಇಲ್ಲಿ ಹೇಳಲಾಗಿದೆ. ಇದು ಆಧ್ಯಾತ್ಮಿಕವಾದ ಅರಿವು.

ಲೌಕಿಕ ಬದುಕಿನಲ್ಲಿ ಮುಕ್ತಿಯನ್ನು ಪಡೆಯುವ ಜೀವನವಿಧಾನವನ್ನು ನಿರ್ದೇಶಿಸಿಕೊಳ್ಳುವಾಗ ಚಂದ್ರನಿಂದ ಸಂಪಾದಿಸಬೇಕಾದ ಜ್ಞಾನಗಳೂ ಸಾಕಷ್ಟಿವೆ. ಮೊತ್ತ ಮೊದಲು ಈ ಜಗತ್ತಿನಲ್ಲಿ ಯಾವುದೂ ನನ್ನದಲ್ಲ, ನಾನು ಎಂಬುದೂ ನನ್ನದಲ್ಲ ಎಂದು ಅರಿತುಕೊಳ್ಳಬೇಕು. ಚಂದ್ರನೇ ಇದಕ್ಕೆ ಸ್ಪಷ್ಟ ಉದಾಹರಣೆ. ಚಂದ್ರನ ಬೆಳದಿಂಗಳು ಅವನ ಸ್ವಂತದ್ದಲ್ಲ. ಅದು ಸೂರ್ಯನಿಂದ ಪ್ರತಿಬಿಂಬಿತವಾದ ಬೆಳಕು. ಅದರೆ ಎಳೆಯ ಮಗುವೂ ಚಂದ್ರನನ್ನು ಗುರುತಿಸುವುದು ಮಾತ್ರ ಆ ಬೆಳದಿಂಗಳಿನಿಂದಾಗಿಯೇ. ಇಲ್ಲವಾದಲ್ಲಿ ಚಂದ್ರನಿರುವುದು ಬರಿಗಣ್ಣಿಗೆ ನಮಗೆ ಕಾಣದು. ನಾವ ಕೂಡ ಇದಕ್ಕೆ ಹೊರತಲ್ಲ. ನಾವು ಇದ್ದೇವೆ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ ನಾವು ಏನಾಗಿದ್ದೇವೆ? ಎಂಬುದು ಪರರೇ ಹೇಳಬೇಕು. ನಮ್ಮ ಇರುವಿಕೆ ಎಂಬುದು ಪ್ರಸ್ತುತವಾಗಿರಬೇಕು. ಅದಕ್ಕೆ ನಾನು-ನನ್ನದು ಎಂಬ ಮೋಹವನ್ನು ಸಂಪೂರ್ಣವಾಗಿ ಬಿಡಬೇಕು.

ಚಂದ್ರನು ಸೂರ್ಯನಿಂದ ಪ್ರತಿಬಿಂಬಿಸುವ ಬೆಳಕನ್ನು ತನ್ನೊಳಗೇ ಇಟ್ಟುಕೊಳ್ಳಲಾರ. ಹುಣ್ಣಿಮೆಯದಿನ ಸಂಪೂರ್ಣವಾಗಿ, ಆ ಬಳಿಕ ಕಡಿಮೆಯಾಗುತ್ತ ಹೋಗೆ ಕೊನೆಗೆ ಎಷ್ಟು ದೊರೆಯುವುದೋ ಅಷ್ಟನ್ನು ಜಗತ್ತಿಗೆ ಹಂಚಿಬಿಡುತ್ತಾನೆ. ನಾವು ಕೂಡ ಅಂತಹ ಉದಾರತೆಯನ್ನು ಬೆಳೆಸಿಕೊಳ್ಳಬೇಕು. ನಾವು ಪಡೆದದ್ದನ್ನು ಹನಿಯಾದರೂ ಹಂಚುವ ಸತ್ಕರ್ಮದಲ್ಲಿ ತೊಡಗಿಕೊಳ್ಳಬೇಕು. ಇನ್ನು ಎಲ್ಲರೂ ನನಗಿಂತಲೂ ಉತ್ತಮರು ಎಂದು ತಿಳಿದು ಗೌರವಾದರದ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು. ಸೂರ್ಯನಿರುವಾಗ ಚಂದ್ರ ಕಾಣಿಸುವುದಿಲ್ಲ. ಅಮವಾಸ್ಯೆಯ ದಿನ ಸೂರ್ಯನ ಬೆಳಕು ಚಂದ್ರನನ್ನು ಮುಟ್ಟುವುದೂ ಇಲ್ಲ. ನಮ್ಮ ಬದುಕಿನ ಒಳಗುಟ್ಟೇ ಇದು. ಚಂದ್ರನಂತೆ ನಾವು ಕೂಡ ಪರಾವಲಂಬಿಗಳೇ. ಪ್ರತಿ ಜೀವಿಯು ಬದುಕಿದೆ ಎಂದರೆ ಇನ್ನೊಂದು ವಸ್ತುವನ್ನೋ ಜೀವಿಯನ್ನೂ ಅವಲಂಬಿಸಿದೇ ಎಂದರ್ಥ. ಗಿಡಕ್ಕೆ ಮಣ್ಣು ಬೇಕು, ಹುಲಿಗೆ ಆಹಾರಕ್ಕೆ ಇನ್ನೊಂದು ಪ್ರಾಣಿ ಬೇಕು, ದನಕ್ಕೆ ಹುಲ್ಲು, ಕಪ್ಪೆಗೆ ಹುಳ-ಹಪ್ಪಟೆ, ಹೀಗೆ ಎಲ್ಲವೂ ಪರಾವಲಂಬಿಯೇ. ಹಾಗಾಗಿ ಸ್ವಂತವಾಗಿ ಪ್ರಕೃತಿಯಿಂದ ಹೊರಗಿದ್ದು ಬದುಕಲಾಗದು. ಆತ್ಮವು ದೇಹದಲ್ಲಿದೆ ಎಂಬುದನ್ನು ಅರಿಯಬೇಕು. ಆತ್ಮವು ದೇಹವನ್ನು ಬಿಟ್ಟಕ್ಷಣವು ನಾವು ಅಮವಾಸ್ಯೆಯ ಚಂದಿರನಂತೆ.

ಚಂದ್ರನೂ ಜಾಣ. ಆತ ಪ್ರಖರವಾದ ಬೆಳಕಿರುವ ಸೂರ್ಯನಿಂದಲೇ ಬೆಳಕನ್ನು ಪ್ರತಿಬಿಂಬಿಸುತ್ತಾನೆ. ಅವನಿಗೂ ಗೊತ್ತು ಯಾವುದನ್ನು ಎಲ್ಲಿಂದ ಪಡೆದು, ಹೇಗೆ ಹಂಚಬೇಕೆಂಬುದು. ಇದು ನಮಗೆ ಮಾರ್ಗದರ್ಶಿ. ಹೀಗೆ ಚಂದ್ರನು ಜ್ಞಾನವನ್ನು ಹೇಗೆ ಗಳಿಸಬೇಕು ಮತ್ತು ಹೇಗೆ ಪರರಿಗೆ ಹಂಚಬೇಕು ಎಂಬುದನ್ನು ತಿಳಿಸುವ ಗುರುವಾಗಿದ್ದಾನೆ. ಚಂದ್ರನು ವೈಜ್ಞಾನಿಕವಾಗಿ ಒಂದು ಗ್ರಹವಾಗಿದ್ದರೂ ಧಾರ್ಮಿಕವಾಗಿ ಆತನನ್ನು ನಾವು ದೇವರ ರೂಪದಲ್ಲಿ ಪೂಜಿಸುತ್ತೇವೆ. ಅಜ್ಞಾನದ ಅಂದಕಾರ ಹೋಗಿಸುವುದಾದರೆ ಅವೆಲ್ಲವೂ ಗುರುಗಳೇ. ಅದು ಬೆಳದಿಂಗಳಾದರೂ ಸರಿ; ಹಣತೆಯ ಬೆಳಕಾದರೂ ಸರಿ.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here