ಪೆರುವಾಯಿ : ದೇವಸ್ಥಾನದ ಜೀರ್ಣೋದ್ಧಾರದಿಂದ ಮನಸ್ಸುಗಳು ಒಟ್ಟಾಗುತ್ತವೆ. ದೇಗುಲ ಜೀರ್ಣೋದ್ಧಾರ ಭಗವಂತ ನೀಡಿದ ಅವಕಾಶ. ಅದನ್ನು ಕರ್ತವ್ಯ ಎಂದು ತಿಳಿದುಕೊಳ್ಳಬೇಕು. ಇದರಿಂದ ನಮ್ಮ ಉದ್ಧಾರವೂ ನಿಶ್ಚಿತ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ರವಿವಾರ ಪೆರುವಾಯಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಆಯೋಜಿಸಿದ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಇತಿಹಾಸ ಇರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಜನರ ಸಹಭಾಗಿತ್ವ ಪಡೆದು ಪುಣ್ಯ ಗಳಿಸಬೇಕು. ಮನಸ್ಸನ್ನು ಒಟ್ಟು ಮಾಡುವ ಕಾರ್ಯವಾಗಬೇಕು. ಗ್ರಾಮಸ್ಥರು ನಿತ್ಯ ದೇವಾಲಯಕ್ಕೆ ಭೇಟಿ ನೀಡಬೇಕು. ಎರಡು ಹೊತ್ತು ಭಜನೆ ಮಾಡಬೇಕು. ಹಿಂದೆ ಸಂಕಷ್ಟದಲ್ಲಿಯೂ ಇಲ್ಲಿ ಪೂಜೆ ನಿಲ್ಲಿಸಲಿಲ್ಲ. ಅದ್ದೂರಿಯ ಬ್ರಹ್ಮಕಲಶದ ಬಳಿಕವೂ ಇನ್ನಷ್ಟು ವೈಭವದಿಂದ ನಿತ್ಯವೂ ಗೋಪಾಲಕೃಷ್ಣನಿಗೆ ಪೂಜೆ ಪುನಸ್ಕಾರಗಳು ಸಲ್ಲಬೇಕು ಎಂದು ಹೇಳಿದರು. ಆಡಳಿತ ಮೊಕ್ತೇಸರ ಸಚಿನ್ ಭಟ್ ಅಡ್ವಾಯಿ, ವೆಂಕಪ್ಪ ಮಾರ್ಲ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಮನೋಹರ ಶೆಟ್ಟಿ ಪೇರಡ್ಕ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಡ್ವಾಯಿ ನಾರಾಯಣ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ ಪ್ರಸ್ತಾವನೆಗೈದರು. ಬ್ರಹ್ಮಕಲಶೋತ್ಸವದ ಸಮಿತಿ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಕಲಾೖತ್ತಿಮಾರು ವಂದಿಸಿದರು. ರೇವತಿ ಸಿ.ಎಚ್. ಆಶಯಗೀತೆ ಹಾಡಿದರು. ಮಂಜುನಾಥ ರೈ ಕಲಾೖತ್ತಿಮಾರು ಕಾರ್ಯಕ್ರಮ ನಿರೂಪಿಸಿದರು.
ಕ್ರಿಯಾಶೀಲರಾಗಿಕೃಷ್ಣನೆಂದರೆ ಕೌಶಲ, ಕ್ರಿಯಾಶೀಲಗುಣ. ಭಗವದ್ಗೀತೆ ನಮ್ಮ ಬದುಕಿನಮಾರ್ಗ. ಗೋಪಾಲಕೃಷ್ಣ ದೇವರುಕಾರಣಿಕ ದೇಗುಲವನ್ನಾಗಿಸಿದ್ದಾನೆ.
ಅದಕ್ಕಾಗಿ ಇಲ್ಲಿ ಗೋಶಾಲೆ ನಿರ್ಮಿಸಬೇಕು. ಬ್ರಹ್ಮಕಲಶ ಸಂದರ್ಭ ಸ್ವತ್ಛತೆಗೆ ಪ್ರಾಮುಖ್ಯ ಕೊಡಬೇಕಾಗಿದೆ. ಉಪಸಮಿತಿಗಳು, ಆರ್ಥಿಕ ಸಮಿತಿಗಳು
ಹೆಚ್ಚು ಕ್ರಿಯಾಶೀಲವಾಗಬೇಕು.
ಶ್ರೀ ಗುರುದೇವಾನಂದ