ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಸಮೀಪದ ಬಸವನ ಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ತೆನೆ ಮುಹೂರ್ತ ಮತ್ತು ನವಾನ್ನ ಭೋಜನ ಸೋಮ ವಾರ ನಡೆಯಿತು.
ಭಕ್ತರು ಅಕ್ಕಿ, ತೆಂಗಿನ ಕಾಯಿ, ತರಕಾರಿ, ದವಸ -ಧಾನ್ಯಗಳನ್ನು ದೇವರಿಗೆ ಅರ್ಪಿಸಿದರು. ತೆನೆ ಮುಹೂರ್ತ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.
ದೇಗುಲದ ಅರ್ಚಕರು ಧಾಮಿಕ ವಿಧಿ ವಿಧಾನ ನೆರವೇರಿಸಿದರು. ದೇವಸ್ಥಾನದಲ್ಲಿ ಭತ್ತದ ಕದಿರಿಗೆ ಪೂಜೆ ನಡೆದು ಬಳಿಕ ಕಟ್ಟಿ ಕದಿರನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಮಕ್ಕಳಿಕೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಅಪರಾಹ್ನ ನವಾನ್ನ ಭೋಜನದಲ್ಲಿ ಹೊಸ ಅಕ್ಕಿ ಊಟ ನೆರವೇರಿತು. ನೂರಾರು ಭಕ್ತರು ದೇವಸ್ಥಾನದ ತೆನೆ ಮುಹೂರ್ತದಲ್ಲಿ ಪಾಲ್ಗೊಂಡು ನವಾನ್ನ ಸ್ವೀಕರಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವಣ್ಣ ಗೌಡ ಜಾಡಿಮನೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ನಾಳ, ಸಮಿತಿಗಳ ಸದಸ್ಯರು, ಕೂಡು ಕಟ್ಟಿನ ಭಕ್ತರು ಉಪಸ್ಥಿತರಿದ್ದರು.